ಚಿಕ್ಕಮಗಳೂರು : ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮುತೋಡಿ ವಲಯದಲ್ಲಿ ಕಾಡೆಮ್ಮೆ ಒಂದು ಕೆಂಪು ಬಣ್ಣದಿಂದ ಕೂಡಿರುವುದು ಕಂಡುಬಂದಿದೆ. ವನ್ಯಜೀವಿಗಳ ಪ್ರಪಂಚದಲ್ಲಿ ಅಪರೂಪಕೊಮ್ಮೆ ಈ ರೀತಿಯ ಬಣ್ಣದಲ್ಲಿ ಬದಲಾವಣೆ ಕಂಡುಬರುತ್ತದೆ.
ಮೆಲನಿನ್ ಎಂಬ ಅಂಶದ ಏರುಪೇರಿನಿಂದ ಜೀವಿಯ ದೇಹದ ಬಣ್ಣವು ಬದಲಾವಣೆ ಆಗುವುದು ಒಂದು ಸಹಜ ಪ್ರಕ್ರಿಯೆಯಾಗಿದೆ. ಈ ಕಾಡೆಮ್ಮೆಯು ಕರುವೊಂದಕ್ಕೆ ಜನ್ಮನೀಡಿ ಅದು ನಸು ಕೆಂಪು ಬಣ್ಣದಿಂದ ಕೂಡಿರುವುದು ವಿಶೇಷವಾಗಿದೆ. ಹಿಂದಿನ ಆರ್ ಎಫ್ ಓ ರವರು ಒಬ್ಬರು ಈ ಕಾಡೆಮ್ಮೆಯನ್ನು ಮುತೋಡಿ ವಲಯದ ಹಿಪ್ಲಾ ಭಾಗದಲ್ಲಿ ಕರುವಾಗಿದ್ದ ಸಂದರ್ಭದಲ್ಲಿ ನೋಡಿದ್ದಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ