ವಿಜಯಪುರ : ಜಿಲ್ಲೆಯಲ್ಲಿ ರೌಡಿಶೀಟರೊಬ್ಬನ ಬರ್ಬರ ಹತ್ಯೆಯಾಗಿದೆ. ರೌಡಿಶೀಟರ್ ಸತೀಶ್ ರೆಡ್ಡಿ ನಾಗನೂರ (28) ಕೊಲೆಯಾದವ.
ನಗರದ ಸೋಲಾಪುರ ರಸ್ತೆಯ ರಿಂಗ್ ರೋಡ್ ಬಳಿ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಸತೀಶ್ಗೆ ಹೊಡೆದು ಕೊಲೆಗೈದಿದ್ದಾರೆ. ಹಳೆ ವೈಷಮ್ಯ ಹಾಗೂ ಹಣಕಾಸಿನ ವಿಚಾರದಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ. ದುಷ್ಕರ್ಮಿಗಳು ಪರಾರಿಯಾಗಿದ್ದು, ಆದರ್ಶನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.