ಮೈಸೂರು : ಕಿಲ್ಲರ್ ಕೊರೊನಾ ಮಹಾಮಾರಿ ಎಫೆಕ್ಟ್ ಸ್ವಾತಂತ್ರ ಹೋರಾಟಗಾರರ ಮೇಲೂ ಪರಿಣಾಮ ಬೀರಿದೆ.ಸಕಾಲದಲ್ಲಿ ಗೌರವಧನ ಪಾವತಿಯಾಗದೆ ತತ್ತರಿಸಿದ್ದಾರೆ. ಕಳೆದ 3 ತಿಂಗಳಿಂದ ಸ್ವಾತಂತ್ರ ಹೋರಾಟಗಾರರ ಕೈಸೇರದ ಗೌರವಧನಕ್ಕಾಗಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದಿದೆ.
ಹಣ ಪಾವತಿಸುವಂತೆ ಸರ್ಕಾರದ ಆದೇಶವಿದ್ದರೂ ಜಿಲ್ಲಾಡಳಿತ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪ್ರತಿ ತಿಂಗಳು ಸರ್ಕಾರದಿಂದ ೧೦ ಸಾವಿರ ಗೌರವಧನವನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುತ್ತಿತ್ತು.
ಕೊರೊನಾ ಹಿನ್ನಲೆ ಕಳೆದ 3 ತಿಂಗಳಿಂದ ಹಣ ಪಾವತಿಯಾಗಿಲ್ಲ. ಕುಟುಂಬಸ್ಥರೂ ಸೇರಿದಂತೆ ರಾಜ್ಯದಲ್ಲಿ 3900ಕ್ಕೂ ಹೆಚ್ಚು ಮಂದಿ ಸ್ವಾತಂತ್ರ ಹೋರಾಟಗಾರರು ಗೌರವಧನ ಪಡೆಯುತ್ತಿದ್ದಾರೆ.
ಈ ಪೈಕಿ ಮೈಸೂರಿನಲ್ಲಿ110 ಮಂದಿ ಗೌರವ ಧನ ಪಡೆಯುತ್ತಿದ್ದಾರೆ.
ಸ್ವಾತಂತ್ರ ಹೋರಾಟಗಾರರನ್ನ ಮರೆತ ಸರ್ಕಾರಿ ಸಿಬ್ಬಂದಿಗಳು ಕೊರೊನಾ ಕೆಲಸದಲ್ಲಿ ಮುಳುಗಿದ್ದಾರೆ.
ಮೂರು ತಿಂಗಳಿಂದ ಕಚೇರಿಗೆ ಅಲೆಯುತ್ತಿರುವ ಸ್ವಾತಂತ್ರ ಹೋರಾಟಗಾರರು ಹೈರಾಣರಾಗಿದ್ದಾರೆ.
ಸರ್ಕಾರದಿಂದ ಬರುವ ಗೌರವ ಧನವನ್ನೇ ಕೆಲವರು ನಂಬಿದ್ದಾರೆ.ಇಳಿ ವಯಸ್ಸಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ.ಗೌರವಧನ ತಲುಪುತ್ತಿಲ್ಲ. ಇನ್ನಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.