Monday, December 23, 2024

ಏಷ್ಯಾದ ಎರಡನೇ ಅತಿದೊಡ್ಡ ಅಮರಗೋಳ ಎಪಿಎಂಸಿ ಬಂದ್

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಲಾಕ್ ಡೌನ್ ಓಪನ್ ಆದ ಬಳಿಕವೂ ಮತ್ತೊಮ್ಮೆ ಸಾರ್ವಜನಿಕರು ಹಾಗೂ ರೈತರು ಸಮಸ್ಯೆಗಳನ್ನು ಎದುರಿಸುವಂತ ಪರಿಸ್ಥಿತಿ ಎದುರಾಗಿದೆ.

ಏಷ್ಯಾದ ಎರಡನೇ ಅತಿದೊಡ್ಡ ಎಪಿಎಂಸಿ ಎಂಬ ಖ್ಯಾತಿ ಪಡೆದಿರುವ ವಾಣಿಜ್ಯನಗರಿ ಹುಬ್ಬಳ್ಳಿಯ ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಎಪಿಎಂಸಿ ಜು.27ರಿಂದ ವ್ಯಾಪಾರಸ್ಥರು ಅನಿರ್ಧಿಷ್ಟ ಅವಧಿಯವರೆಗೆ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಎಪಿಎಂಸಿ ಸೆಸ್ ಸಂಪೂರ್ಣವಾಗಿ ಕೈ ಬಿಡುವಂತೆ ಒತ್ತಾಯಿಸಿ ವ್ಯಾಪಾರವನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದು,ಜು.27ರಿಂದ ಎಪಿಎಂಸಿ ವ್ಯಾಪಾರ ಅನಿರ್ಧಿಷ್ಟ ಅವಧಿಯವರೆಗೆ ಬಂದ್ ಆಗಲಿದ್ದು, ಎಪಿಎಂಸಿಯನ್ನು ನಂಬಿಕೊಂಡಿರುವ ಸಾವಿರಾರು ರೈತ ಕುಟುಂಬಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ ಹೊರಡಿಸಿರುವ ಫಾರ್ಮರ್ಸ್ ಪ್ರೋಡ್ಯೂಸ್ ಆ್ಯಂಡ್ ಟ್ರೇಡರ್ಸ್ ಆ್ಯಂಡ್ ಕಾಮರ್ಸ್ 2020 ರ ಅನ್ವಯ ಎಪಿಎಂಸಿ ಹೊರಗೆ ನಡೆಯುವ ವ್ಯವಹಾರಗಳಿಗೆ ಶುಲ್ಕ ನೀಡದಿರಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು,ಅದೇ ರೀತಿ ಎಪಿಎಂಸಿ ವ್ಯಾಪಾರಸ್ಥರಿಗೆ ಸೆಸ್ ಪಡೆಯದಂತೆ ಒತ್ತಾಯಿಸಿ ಸಂಪೂರ್ಣ ಬಂದ್ ಮಾಡಲು ಎಪಿಎಂಸಿ ವರ್ತಕರು ತೀರ್ಮಾನ ಕೈಗೊಂಡಿದ್ದಾರೆ.

ಇನ್ನೂ ಈರುಳ್ಳಿ, ಕಾಳುಕಡಿ, ಒಣಮೆಣಸು,ಶೇಂಗಾ ಹತ್ತಿಕಾಳು‌ ಸೇರಿದಂತೆ ವಿವಿಧ ಉತ್ಪನ್ನಗಳ ವ್ಯಾಪಾರದ ಜೊತೆಗೆ ತರಕಾರಿ ಮಾರಾಟ ಕೂಡ ಸಂಪೂರ್ಣವಾಗಿ ಬಂದ್ ಆಗಲಿದ್ದು,ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ.

RELATED ARTICLES

Related Articles

TRENDING ARTICLES