Saturday, January 18, 2025

ಪ್ಯಾಂಗೋಲಿನ್ ಹತ್ಯೆಗೈದು ವಿಕೃತಿ ಮೆರೆದ ಕಿಡಿಗೇಡಿಗಳು

ಕೋಲಾರ : ವಸತಿ ಪ್ರದೇಶಕ್ಕೆ ದಾರಿ ತಪ್ಪಿ ಬಂದ ಮುಗ್ದ ಪ್ಯಾಂಗೋಲಿನ್ ಕಿಡಿಗೇಡಿಗಳಿಂದ ಹತ್ಯೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ನಗರದ ಹೊರವಲಯದಲ್ಲಿನ ಅಂತರಗಂಗೆ ಬೆಟ್ಟದಿಂದ ತಪ್ಪಿಸಿಕೊಂಡು ಷಹಿನ್ ಷಾ ನಗರಕ್ಕೆ ಬಂದ ಪಂಗೋಲಿಯನ್ ದುರಳರ ಕೈಗೆ ಸಿಕ್ಕಿ ಸಾವನ್ನಪ್ಪಿದೆ. ಕೋಲಾರ ನಗರದಾದ್ಯಂತ ಕಳೆದ ವಾರ ಜಡಿ ಮಳೆ‌ ಸುರಿದಿದೆ. ರಾತ್ರಿ 10 ಗಂಟೆ ವೇಳೆಯಲ್ಲಿ ಅಂತರಗಂಗೆ ಬೆಟ್ಟದಿಂದ ಭಾರಿ ಗಾತ್ರದ ಪ್ಯಾಂಗೋಲಿನ್ ತಪ್ಪಲಿನಲ್ಲಿರುವ ಷಹಿನ್ ಷಾ ನಗರಕ್ಕೆ ದಿಕ್ಕು ತಪ್ಪಿ ಬಂದಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ದುರಳರು ಪಂಗೋಲಿಯನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ವಿಕೃತಿ ಮೆರೆದಿದ್ದಾರೆ. ಪ್ಯಾಂಗೋಲಿನ್ ಮೃತ ದೇಹವನ್ನು ಕಬ್ಬಿಣದ ಹಾರೆಗೆ ಸಿಕ್ಕಿಸಿಕೊಂಡು ಕಿಡಿಗೇಡಿಗಳು ಮೆರವಣಿಗೆ ನಡೆಸಿ ವಿಕೃತಿ ಮೆರೆದಿರುವ ವಿಡಿಯೋ ಮತ್ತು ಪೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಪ್ಯಾಂಗೋಲಿನ್ ಹತ್ಯೆಗೈದಿರುವ ಕಿಡಿಗೇಡಿಗಳ ಪತ್ತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES