ಬೆಂಗಳೂರು : ಆರೋಗ್ಯಧಿಕಾರಿಯ ಮನೆಯವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಮೂವರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಬೊಮ್ಮನಹಳ್ಳಿಯ ಬಿಬಿಎಂಪಿ ವಲಯದಲ್ಲಿ ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ನಾಗೇಂದ್ರ ಕುಮಾರ್ ಅವರ 70ವರ್ಷದ ತಂದೆ,65 ವರ್ಷದ ತಾಯಿ,49 ವರ್ಷದ ತಂಗಿಯ ಗಂಡ ಕೊರೊನಾ ಸೋಂಕಿಗೆ ಬಲಿಯಾದ ದುರ್ದೈವಿಗಳು ತಂಗಿಯ ಗಂಡ ವೈದ್ಯ ವೃತ್ತಿಯಲ್ಲಿದ್ದರು ಯಾವುದೇ ಖಾಸಗಿ ಆಸ್ಪತ್ರೆಗಳಗಳಲ್ಲಿ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಇದ್ದಿದ್ದು ವಿಷದಾನೀಯ ಈ ಕುಟುಂಬದ 6 ಮಂದಿ ಸದಸ್ಯರಲ್ಲಿ ಒಟ್ಟು ಮೂರು ಮಂದಿ ಇದೀಗ ಕೊರೋನಗೆ ಬಲಿಯಾಗಿದ್ದಾರೆ ದೊಡ್ಡ ದೊಡ್ಡ ಅಧಿಕಾರಿಗಳ ಕುಟುಂಬಗಳ ಪಾಡೇ ಈ ಸ್ಥೀತಿಯಾದ್ರೆ ಇನ್ನು ಬಡವರು, ಜನಸಾಮಾನ್ಯರ ಪರೀಸ್ಥೀತಿ ಏನಾಗಬೇಡ ಎಂಬುದು ಪ್ರಶ್ನೆಯಾಗಿದೆ …., ಸರ್ಕಾರ ಇನ್ನಾದರೂ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ಎಲ್ಲ ರೀತಿಯಲ್ಲಿಯೂ ಕ್ರಮ ವಹಿಸಿ ನಿರ್ಲಕ್ಷ್ಯ ತೋರುವ ಆಸ್ಪತ್ರೆಯ ಮೇಲೆ ಹಾಗೂ ವೈಧ್ಯರ ಮೇಲೆ ಸೂಕ್ತ ಕ್ರಮ ಕೈಗೊಂಡರೆ ಇಂತಹ ಕೃತ್ಯಗಳು ಮತ್ತೆ ಮರುಕಳಿಸದಂತೆ ತಡೆಯಬಹುದು….