ಮಂಡ್ಯ : ನಗರದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯ ಫುಟ್ ಪಾತ್ ನಲ್ಲಿ ಭಿಕ್ಷುಕಿಯೊಬ್ಬಳ ರೇಪ್ ಅಂಡ್ ಮರ್ಡರ್ ಆಗಿದೆ.
ನಗರದ ಬಾಟಾ ಶೋ ರೂಂ ಪಕ್ಕದ ಹೆಚ್.ಪಿ.ಎನ್ ವೈನ್ಸ್ ಎದುರಿನ ಜಗುಲಿಯ ಮೇಲೆ ಅರೆ ನಗ್ನಾವಸ್ಥೆಯಲ್ಲಿರುವ, ರಕ್ತಸಿಕ್ತ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಅಪರಿಚಿತ ಮಹಿಳೆ ಕಳೆದ ಕೆಲ ವರ್ಷಗಳಿಂದ ಮಂಡ್ಯ ನಗರದಲ್ಲೇ ಭಿಕ್ಷಾಟನೆ ಮಾಡುತ್ತಿದ್ದಳು. ಕೊಲೆಯಾದ ಸ್ಥಳದಲ್ಲೇ ಮಲಗುತ್ತಿದ್ದಳು ಎನ್ನಲಾಗಿದೆ.
ಗುರುವಾರ ತಡ ರಾತ್ರಿ ಕಾಮುಕರು ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಆಕೆಯ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಪೂರ್ವ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮಂಡ್ಯದಲ್ಲಿ ಭಿಕ್ಷುಕಿಯ ರೇಪ್ & ಮರ್ಡರ್
TRENDING ARTICLES