ತುಮಕೂರು : ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಕಾರು ಸೇರಿದಂತೆ ಟ್ರಾಕ್ಟರ್ ಮತ್ತೊಂದು ಕಾರಿನ ನಡುವೆ ಸರಣಿ ಅಪಘಾತ ನಡೆದಿದೆ.
ಶಿವಮೂಗ್ಗದಿಂದ ಶಿರಾ ಮೂಲಕ ಬೆಂಗಳೂರಿಗೆ ತೆರಳುವಾಗ ಅಫಘಾತವಾಗಿದ್ದು ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಅರುಣ್ ಜೊತೆಗಿದ್ದ ಜಿಪಂ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಜಿಲ್ಲಾ ಚೇಂಬರ್ ಆಫ್ ಕಾಮಸ್೯ ಅಧ್ಯಕ್ಷ ವಾಸುದೇವ್ ಸಣ್ಣ ಪುಣ್ಣ ಗಾಯವಾಗಿದೆ. ಬೈಕ್ ಅಡ್ಡ ಬಂದ ಹಿನ್ನೆಲೆ ಕಾರು ನಿಯಂತ್ರಣಕ್ಕೆ ಬರದೇ ಅಪಘಾತ ಸಂಭವಿಸಿದ್ದು, ಹಿಂದಿನಿಂದ ಬಂದ ಟ್ರಾಕ್ಟರ್ ಸೇರಿದಂತೆ ಮತ್ತೊಂದು ಕಾರಿಗೂ ಅಪಘಾತ. ಯಾವುದೇ ಪ್ರಾಣಾಪಾಯವಿಲ್ಲದೆ, ವಾಹನದಲ್ಲಿದ್ದವರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು ಕಳ್ಳಂಬೆಳ್ಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೇಮಂತ್ ಕುಮಾರ್ .ಜೆ.ಎಸ್ ಪವರ್ ಟಿವಿ ತುಮಕೂರು.