ಕಲಬುರಗಿ : ರಾತ್ರಿ ಹೋತ್ತಲ್ಲಿ ಕಾಡು ಪ್ರಾಣಿಗಳು ರಸ್ತೆ ಮೇಲೆ ಓಡಾಡುವ ಸಂದರ್ಭ ಇರೋದ್ರಿಂದ ವಾಹನಗಳನ್ನ ಜಾಗರೂಕತೆಯಿಂದ ಓಡಿಸಿ ಅಂತಾ ಎಷ್ಟೆ ಹೇಳಿದ್ರು ಸಹ, ವಾಹನ ಸವಾರರು ವೇಗವಾಗಿ ಓಡಿಸಿ ಪ್ರಾಣಿಗಳ ಜೀವಕ್ಕೆ ಕಂಟಕವಾಗ್ತಿದ್ದಾರೆ.. ಕಲಬುರಗಿ ಹೊರವಲಯದ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದ ರಸ್ತೆ ಮೇಲೆ ತಡರಾತ್ರಿ ಮುಳ್ಳು ಹಂದಿಯೊಂದು ರಸ್ತೆಯನ್ನ ದಾಟುತ್ತಿತ್ತು.. ಈ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಮುಳ್ಳು ಹಂದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುಳ್ಳು ಹಂದಿಯ ಸೊಂಟ ಹಾಗೂ ಎರಡು ಕಾಲು ಮುರಿದಿದೆ.. ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಕೊನೆಗೆ ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಮುಳ್ಳು ಹಂದಿಯನ್ನ ಕಂಡ ಸ್ಥಳೀಯರು ಪ್ರಾಣಿ ದಯಾ ಸಂಘದವರಿಗೆ ತಿಳಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರಾಣಿ ದಯಾಸಂಘದವರು ಅರಣ್ಯಾಧಿಕಾರಿಗಳೊಂದಿಗೆ ತೆರಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮುಳ್ಳು ಹಂದಿಗೆ ಚಿಕಿತ್ಸೆ ನೀಡಿದ್ದಾರೆ.. ಸದ್ಯ ಚೇತರಿಸಿಕೊಳ್ಳುತ್ತಿರುವ ಮುಳ್ಳು ಹಂದಿಯನ್ನ ಕಲಬುರಗಿ ನಗರದ ಮಿನಿ ಝೂ ಗೆ ಬಿಡಲಾಗಿದ್ದು, ಅದು ಸಂಪೂರ್ಣವಾಗಿ ಗುಣಮುಖವಾಗೊವರೆಗೂ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.. ಸದ್ಯ ಮಿನಿ ಝೂನಲ್ಲಿ ಚೇತರಿಸಿಕೊಳ್ಳುತ್ತಿರುವ ಮುಳ್ಳು ಹಂದಿಗೆ ಆಹಾರ ಮತ್ತು ಕುಡಿಯುವ ನೀರು ಕೊಡಲಾಗಿದೆ…