Friday, January 17, 2025

ತಹಶೀಲ್ದಾರ್​ಗೆ ಕೊರೋನಾ ಪಾಸಿಟಿವ್​ ಹೆಚ್ಚಿದ ಆತಂಕ

ಹಾವೇರಿ : ಜಿಲ್ಲೆಯ ಶಿಗ್ಗಾವಿ ತಹಶೀಲ್ದಾರ್‌ ಹಾಗೂ ರಾಣೇಬೆನ್ನೂರು ತಹಶಿಲ್ದಾರರ್‌ಗೆ ಕಳೆದ ಎರಡು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಶಿಗ್ಗಾವಿ ಮತ್ತು ರಾಣೆಬೆನ್ನೂರ ನಗರಗಳಲ್ಲಿ ಕೊರೊನ ಆತಂಕ ಶುರುವಾಗಿದೆ.. ಶಿಗ್ಗಾವಿ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದ ಗಲ್ಲಿ-ಗಲ್ಲಿಗೂ ತಿರುಗಾಡಿ, ತಹಶಿಲ್ದಾರರ್ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ಇದರಿಂದಾಗಿ ಅವರ ಪ್ರಾಥಮಿಕ ಸಂಪರ್ಕ ಇದ್ದವರ ರಿಸಲ್ಟ್ ಪಾಸಿಟಿವ್ ಬಂದಿದೆ.. ಇನ್ನೂ ರಾಣೇಬೆನ್ನೂರ ತಹಶಿಲ್ದಾರ ಕೂಡ, ದಿನ ಬೆಳಗಾದ್ರೆ ತಾಲೂಕಿನ ವಿವಿಧಡೆಯಲ್ಲಿ ಸಂಚರಿಸಿರುವದರಿಂದ ರಾಣೇಬೆನ್ನೂರು ನಗರದಲ್ಲಿ, ಮುಂದಿನ ದಿನಗಳು ಸವಾಲ್ ಆಗುವ ಸಾಧ್ಯತೆ ಹೆಚ್ಚಾಗಿದೆ.. ಈ ಇಬ್ಬರು ತಹಶಿಲ್ದಾರ್ ಕಳೆದ ೧೫ ದಿನಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ತಾಲೂಕಿನೆಲ್ಲಡೆ ಸಂಚಾರ ಮಾಡಿರುವದ್ದರಿಂದ ಜನರಲ್ಲಿ ಕೊರೊನ ಢವಢವ ಶುರುವಾಗಿದೆ.. ತಹಶಿಲ್ದಾರರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರತಿಯೊಬ್ಬ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ತಹಶಿಲ್ದಾರ್ ಸಂಚರಿಸಿರುವ ಪ್ರತಿ ಗ್ರಾಮದ ಜನರ ಸ್ಯ್ಬಾಬ್ ಟೆಸ್ಟ್‌ಗೆ ಜಿಲ್ಲಾಡಳಿತ ಮುಂದಾಗಿದೆ.. ಇಬ್ಬರು ತಹಶಿಲ್ದಾರರ ಪ್ರಾಥಮಿಕ ಸಂಪರ್ಕ ಹೊಂದಿರುವ ಸುಮಾರು 250 ಕ್ಕೂ ಅಧಿಕ ಜನರ ಹೋಮ್ ಕ್ವಾರಂಟೈನ್ ಮಾಡಿ ಸ್ವ್ಯಾಬ್ ಟೆಸ್ಟ್‌ ಕಳಿಸಲಾಗಿದೆ..

RELATED ARTICLES

Related Articles

TRENDING ARTICLES