Friday, January 17, 2025

ಮಾನವೀಯತೆ ಮೆರೆದ ಶಾಸಕ..!

ಶಿವಮೊಗ್ಗ : ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಗೆ ಉಪಚರಿಸಿ ಆಸ್ಪತ್ರೆಗೆ ಕಳಿಸಿ, ಶಾಸಕರೊಬ್ಬರು ಮಾನವೀಯತೆ ಮೆರೆದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೌದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶಾಸಕರಾದ ಆರಗ ಜ್ಞಾನೇಂದ್ರ ರವರು ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಈ ವೇಳೆ, ಹಣಗೆರೆ ಆಯನೂರು ಮದ್ಯದ ಸಿರಿಗೆರೆ ಚೆಕ್ ಪೋಸ್ಟ್ ಬಳಿ ಆಯನೂರಿನ ಬೈಕ್ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಗುದ್ದಿ ಅಪಘಾತ ಮಾಡಿಕೊಂಡಿದ್ರು. ಇದನ್ನು ಗಮನಿಸಿದ ಶಾಸಕರು ತಕ್ಷಣವೇ ತಮ್ಮ ಕಾರು ನಿಲ್ಲಿಸಿ, ಅಪಘಾತ ಮಾಡಿಕೊಂಡಿದ್ದ ವ್ಯಕ್ತಿಗೆ ನೀರು ನೀಡಿ ಉಪಚರಿಸಿ, ನಂತರ ಆ್ಯಂಬುಲೆನ್ಸ್ ಕರೆಸಿ, ವ್ಯಕ್ತಿಯನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಅಪಘಾತಕ್ಕೀಡಾಗಿದ್ದ ವ್ಯಕ್ತಿಯ ಬೆನ್ನು ಮೂಳೆಗೆ ಬಲವಾದ ಪೆಟ್ಟಾಗಿದ್ದು, ಆಯನೂರಿನ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ರು. ಅಪಘಾತವಾಗಿದ್ದ ವ್ಯಕ್ತಿ ಆಯನೂರಿನವರಾಗಿದ್ದು, ವ್ಯಕ್ತಿಯ ಜೊತೆಗಿದ್ದ ವಸ್ತುಗಳನ್ನು ಅವರ ಕುಟುಂಬದವರಿಗೆ ಆಯನೂರಿನವರೆಗೆ ಆಂಬ್ಯುಲೆನ್ಸ್ ಹಿಂದೆಯೇ ಬಂದು ಶಾಸಕ ಆರಗ ಜ್ಞಾನೇಂದ್ರ ತಲುಪಿಸಿದ್ರು. ಅಲ್ಲದೇ, ಮೆಗ್ಗಾನ್ ಆಸ್ಪತ್ರೆಯ ವೈಧ್ಯರಿಗೆ ತಕ್ಷಣವೇ ಸ್ಪಂಧಿಸುವಂತೆ ಕರೆ ಮಾಡಿ ತಿಳಿಸಿ ಮಾನವೀಯತೆ ಮೆರೆದ್ರು. ಒಟ್ಟಾರೆ, ರಾಜಕಾರಣಿಗಳು, ಅಧಿಕಾರಿಗಳು ಕಾರಿನಲ್ಲಿ ಕೂತ್ರೆ ಸಾಕು, ಮೊಬೈಲ್ ನೋಡುತ್ತಾ ಸಾಗುವ ಇಂದಿನ ದಿನಗಳಲ್ಲಿ ಶಾಸಕ ಆರಗ ಜ್ಞಾನೇಂದ್ರರ ಮಾನವೀಯತೆಗೆ ಜನರು ಹ್ಯಾಟ್ಸ್ ಆಫ್ ಹೇಳುತ್ತಿದ್ದಾರೆ.

RELATED ARTICLES

Related Articles

TRENDING ARTICLES