ಕಾರವಾರ : ಗದ್ದೆ ನಾಟಿ ಕೆಲಸಕ್ಕೆ ಯಾರೂ ಬೇರೆ ಊರಿಗೆ ಹೋಗುವಂತಿಲ್ಲ, ಇತರರು ಊರಿಗೆ ಬರುವಂತಿಲ್ಲ. ಇನ್ನು ಬೆಂಗಳೂರಿಗೆ ಪದೇ ಪದೇ ತೆರಳಿದರಂತೂ 5000ರೂ. ದಂಡ. ಇಂಥದ್ದೊಂದು ಘೋಷಣೆ ಕೇಳಿ ಬಂದದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮನ್ಮನೆ ಗ್ರಾಮದಲ್ಲಿ. ಕೊರೊನಾ ನಿಯಂತ್ರಣಕ್ಕಾಗಿ ಗ್ರಾಮದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿದ್ದು, ಹೊರಗಡೆಯಿಂದ ಯಾರೂ ಜನರು ಊರಿಗೆ ಬರುವಂತಿಲ್ಲ ಎಂದು ಸೂಚಿಸಲಾಗಿದೆ. ಬೆಂಗಳೂರಿಗೆ ತೆರಳಿ ಬಂದವರ ಬಗ್ಗೆ ಮಾಹಿತಿ ನೀಡಿದಲ್ಲಿ 1000ರೂ. ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಲಾಗಿದ್ದು, ಜನರು ಗಾರ್ಮೆಂಟ್ಸ್‌ಗಳಿಗೂ ಭೇಟಿ ನೀಡುವಂತಿಲ್ಲ. ಶಿವಮೊಗ್ಗದ ಸಾಗರ ಹಾಗೂ ಇತರ ಯಾವುದೇ ನಗರಗಳಿಗೆ ಹೋಗುವಂತಿಲ್ಲ ಎಂದು ಸಿದ್ಧಾಪುರದಲ್ಲಿ ಗ್ರಾಮಾಭಿವೃದ್ಧಿ ಸಮಿತಿ ಕಟ್ಟಾಜ್ಞೆ ಹೊರಡಿಸಿದೆ. ಇನ್ನು ಯಾರಾದ್ರೂ ನಿಯಮ ಮೀರಿದಲ್ಲಿ ಗ್ರಾಮಾಭಿವೃದ್ಧಿ ವತಿಯಿಂದ 5000 ರೂ. ದಂಡ ನೀಡುವ ಬಗ್ಗೆ ಎಚ್ಚರಿಸಿರುವ ಮನ್ಮನೆ ಗ್ರಾಮಾಭಿವೃದ್ಧಿ ಸಮಿತಿ ನಿಮ್ಮ ಮಕ್ಕಳು, ಪೋಷಕರ ರಕ್ಷಣೆ ನಿಮ್ಮ ಹೊಣೆ ಎಂದು ಘೋಷಣೆ ಮಾಡಿದೆ.
ಉದಯ ಬರ್ಗಿ ಪವರ್ ಟಿವಿ ಕಾರವಾರ..