ಕಲಬುರಗಿ : ಬಕ್ರಿದ್ ಹಬ್ಬಕ್ಕೆ ಬಲಿ ಕೊಡಲು ತಂದಿದ್ದ ಎಂಟು ಒಂಟೆಗಳನ್ನ ಕಲಬುರಗಿ ಜಿಲ್ಲೆ ಆಳಂದ ಪಟ್ಟಣ ಠಾಣೆ ಪೊಲೀಸರು ರಕ್ಷಿಸಿದ್ದಾರೆ.. ರಾಜಸ್ಥಾನದಿಂದ ಮಹಾರಾಷ್ಟ್ರ ಗಡಿ ಮೂಲಕ ಕಲಬುರಗಿಗೆ ತರಲಾಗ್ತಿದ್ದ ಒಂಟೆಗಳ ಬಗ್ಗೆ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಪೊಲೀಸರು ಸುಮಾರು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಎಂಟು ಒಂಟೆಗಳನ್ನ ರಕ್ಷಿಸಿ ಕಲಬುರಗಿ ಹೊರವಲಯದ ಕೆರೆ ಭೋಸಗಾ ಬಳಿಯಿರುವ ನಂದಿ ಎನಿಮಲ್ ವೆಲ್ಫೆರ್ ಸೊಸೈಟಿಯ ಗೋಶಾಲೆಗೆ ರವಾನಿಸಲಾಗಿದ್ದು, ಒಂಟೆಗಳನ್ನ ಸಾಗಾಟ ಮಾಡುತ್ತಿದ್ದ ಮನೋಜ್ ಸಿಂಧೆ, ಬಾಣೇಶ್ ಸಿತೋಳೆ, ಮನೋಜ್ ಜಾಧವ್, ನಿತೇಶ್ ಸಿಂಧೆ, ಗೋವಿಂದ ಸಿಂಧೆ, ರಾಜೇಶ್ ಸಿಂಧೆ ಸೇರಿದಂತೆ ಎಂಟು ಜನರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಬಕ್ರಿದ್ ಹಬ್ಬ ಸಮೀಪಿಸುತ್ತಿರುವುದರಿಂದ ಪ್ರಾಣಿಗಳ ವಧೆ ಮಾಡಲು ಮುಖ್ಯವಾಗಿ ಒಂಟೆಗಳಿಗೆ ಭಾರಿ ಡಿಮ್ಯಾಂಡ್ ಇದೆ ಎನ್ನಲಾಗಿದೆ.. ಬಂಧಿತ ಆರು ಜನರೆಲ್ಲರೂ ಮಧ್ಯಪ್ರದೇಶ ರಾಜ್ಯದ ಮೂಲದವರು ಎಂಬ ಮಾಹಿತಿ ತಿಳಿದುಬಂದಿದೆ..