Friday, January 17, 2025

ಕ್ರಿಕೆಟ್​ ಪ್ರಿಯರಿಗೆ ಇಲ್ಲಿದೆ ಗುಡ್​ ನ್ಯೂಸ್​ ! ಐಪಿಎಲ್​ ನಡೆಸಲು ಮುಹೂರ್ತ ಫಿಕ್ಸ್​​

ಇಂಡಿಯನ್ ಪ್ರೀಮಿಯರ್ ಲೀಗ್, ಬಿಸಿಸಿಐನ ಶ್ರೀಮಂತ ಕ್ರಿಕೆಟ್ ಟೂರ್ನಿ. ಕರೋನಾ ಬರದೇ ಇದ್ದಿದ್ರೆ, ಇಷ್ಟೋತ್ತಿಗಾಗಲೇ ಐಪಿಎಲ್ ಸೀಸನ್ 13 ಮುಗಿದಿರುತ್ತಿತ್ತು. ಆದ್ರೆ ಈ ವೈರಸ್ ನಿಂದಾಗಿ ಈ ಬಾರಿ ಐಪಿಎಲ್ ನಡೆಯುತ್ತೋ ಇಲ್ವೋ ಅನ್ನೋ ಹಾಗಾಗಿಬಿಟ್ಟಿದೆ. ಇಂಥದ್ರಲ್ಲಿ ಕರ್ನಾಟಕದವರೇ ಆದ, ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್, ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಕೊರೋನಾದಿಂದಾಗಿ ಮುಂದೂಡಲಾಗಿದ್ದ ಐಪಿಎಲ್ ಟೂರ್ನಿ ಬಗ್ಗೆ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಐಪಿಎಲ್ ನ ಗವರ್ನಿಂಗ್ ಚೇರ್ ಮನ್ ಆಗಿರುವ ಬ್ರಿಜೇಶ್ ಪಟೇಲ್, ಈ ಬಾರಿ ಪರಿಪೂರ್ಣ ಐಪಿಎಲ್ ಟೂರ್ನಿಯನ್ನು ನಡೆಸಿಯೇ ನಡೆಸ್ತೀವಿ ಎಂದು ಹೇಳುವ ಮೂಲಕ ಕ್ರಿಕೆಟ್ ಪ್ರಿಯರಿಗೆ ಶುಭವಾರ್ತೆ ನೀಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ಹಾಗಾಗಿ ಐಪಿಎಲ್ ಮ್ಯಾಚ್ ಗಳನ್ನು ಶೆಡ್ಯೂಲ್ ಮಾಡಲು ಸಮಯ ಸಿಕ್ಕಂತಾಗಿದೆ ಎಂದು ಬ್ರಿಜೇಶ್ ಹೇಳಿದ್ದಾರೆ. ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ಸೇರಲಿದ್ದು, ಐಪಿಎಲ್ ನಡೆಸೋ ಬಗ್ಗೆ ಅಂತಿಮ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಈ ಬಾರಿ ಐಪಿಎಲ್ ಯುಎಇನಲ್ಲಿ ನಡೆಯಲಿದೆ ಎಂಬುದು ಬ್ರಿಜೇಶ್ ಅಭಿಪ್ರಾಯ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೇವಲ 60 ಪಂದ್ಯಗಳಿರಲಿವೆಯಂತೆ. ಟಿ-20 ವಿಶ್ವಕಪ್ ಪಂದ್ಯಾವಳಿ ನವೆಂಬರ್ ನಂತರ ನಡೆಯುವ ಸಾಧ್ಯತೆ ಇದೆ. ಹಾಗಾಗಿ, ಐಪಿಎಲ್ ಟೂರ್ನಿ ಸೆಪ್ಟೆಂಬರ್-ನವೆಂಬರ್ ವೇಳೆಯಲ್ಲಿ ಮಾಡಿ ಮುಗಿಸುವ ಪ್ಲಾನ್ ಮಾಡಲಾಗಿದೆಯಂತೆ. ಪಂದ್ಯಗಳು ಯುಎಇನಲ್ಲಿ ನಡೆಸಿದ್ರೂ, ಕರೋನಾ ಪರಿಸ್ಥಿತಿ ತಲೆದೋರಿರೋದ್ರಿಂದ ಅಭಿಮಾನಿಗಳಿಗೆ ಮೈದಾನಕ್ಕೆ ಪ್ರವೇಶವಿರುವುದಿಲ್ಲ.
ಐಪಿಎಲ್ ವೇಳಾಪಟ್ಟಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ, ಅದಾಗಲೇ ಫ್ರಾಂಚೈಸಿ ಓನರ್ ಗಳು ತಮ್ಮ ಗೇಮ್ ಪ್ಲಾನ್ ರೂಪಿಸುವಲ್ಲಿ ಬಿಸಿಯಾಗಿದ್ದಾರೆ. ಆದ್ರೆ ಈಗಿನ ಪರಿಸ್ಥಿತಿಯಲ್ಲಿ ಆಟಗಾರರಿಗೆ ಪ್ರಾಕ್ಟಿಸ್ ಮಾಡಲೂ ಗ್ರೌಂಡ್ ಗಳು ಲಭ್ಯವಿಲ್ಲ. ಐಪಿಎಲ್ ಆಗಲಿ ಅಥಾವಾ ಮತ್ಯಾವುದೇ ಪಂದ್ಯಾವಳಿಯಾಗಲಿ, ಸ್ಟಾರ್ಟ್ ಆಗೋಕು ಮುನ್ನ ಕಮ್ಮಿಯಂದ್ರೂ 3-4 ವಾರಗಳ ಪ್ರಾಕ್ಟಿಸ್ ಬೇಕಾಗುತ್ತೆ. ಇನ್ನು, ವಿದೇಶಿ ಆಟಗಾರು ತಮ್ಮತಮ್ಮ ದೇಶದಿಂದ ನೇರವಾಗಿ ಯುಎಇಗೇ ಬರಲಿದ್ದಾರೆ ಎಂದು ಟೀಮ್ ಓನರ್ ಒಬ್ರು ಹೇಳಿದ್ದಾರೆ.
ಇನ್ನು, ಈ ಬಾರಿ ಪಂದ್ಯಾವಳಿಯ ಕಾಮೆಂಟರಿ ಕೂಡ ವಿಶೇಷವಾಗಿರಲಿದೆಯಂತೆ. ಸುನಿಲ್ ಗವಾಸ್ಕರ್ ರಂತಹ 70 ವರ್ಷ ಮೇಲ್ಪಟ್ಟ ಕೆಲವರು ಕಮೆಂಟರಿ ನೀಡಬೇಕಿರೋದ್ರಿಂದ, ಒಂದು ಸುರಕ್ಷಿತ ಮತ್ತು ಸುಸಜ್ಜಿತವಾದ ರೂಮ್ ವ್ಯವಸ್ಥೆ ಮಾಡೋ ಬಗ್ಗೆಯೂ ತಯಾರಿ ನಡೆದಿದೆಯಂತೆ. ಇದೆಲ್ಲದರ ನಡುವೆ ಈ ಬಾರಿಯ ಐಪಿಎಲ್ ಗೆ ಸ್ಪಾನ್ಸರ್ ಗಳನ್ನು ಹೇಗೆ ಆಕರ್ಶಿಸುತ್ತಾರೆ ಎಂಬುದೇ ಕುತೂಹಲಕರ.

 

RELATED ARTICLES

Related Articles

TRENDING ARTICLES