Friday, January 17, 2025

ದುಬೈನಲ್ಲಿ IPL ಸೀಸನ್ 13…?

ಕೊರೋನಾ ದೆಸೆಯಿಂದ ಎಲ್ಲಾ ಕ್ಷೇತ್ರದಂತೆ ಕ್ರೀಡಾ ಕ್ಷೇತ್ರಕ್ಕೂ ಪೆಟ್ಟು ಬಿದ್ದಿದೆ. ಇದೀಗ ನಿಧಾನಕ್ಕೆ ಮತ್ತೆ ಕ್ರೀಡಾಂಗಣಗಳು ರಂಗೇರಲು ರೆಡಿಯಾಗುತ್ತಿವೆ. ಅಂತೆಯೇ ಕ್ರಿಕೆಟ್ ಜಗತ್ತಿನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿರೋ ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್) ಗೆ ಕೊರೋನಾ ಕಂಟಕವಾಗಿರುವುದಂತೂ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಬೇಸರ ಮೂಡಿಸಿದೆ. ಇದೀಗ ಬಿಸಿಸಿಐ ಐಪಿಎಲ್​ ನಡೆಸೋ ಪ್ಲ್ಯಾನ್​ನಲ್ಲಿದ್ದು, ಆ ಮೂಲಕ ಅಭಿಮಾನಿಗಳಿಗೆ ಸ್ವೀಟ್​ ನ್ಯೂಸ್ ಸಿಕ್ಕಂತಾಗಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ 18ರಿಂದ ನವೆಂಬರ್ 15ರವರೆಗೆ ಟಿ20 ವರ್ಲ್ಡ್​ಕಪ್​  ನಡೆಯಬೇಕಿತ್ತು. ಆದ್ರೆ, ಕೊರೋನಾ ಕಾರಣದಿಂದ ಐಸಿಸಿ ನಿಗದಿಯಾಗಿದ್ದ ಟಿ20 ವಿಶ್ವಸಮರವನ್ನು ಮುಂದೂಡಿದೆ.  ಇದು ಶತಾಯಗತಾಯ ಐಪಿಎಲ್ ನಡೆಸಿಯೇ ಸಿದ್ಧ ಅಂತಿರೋ ಬಿಸಿಸಿಐಗೆ ವರದಾನವಾಗಿದೆ. ಟಿ20 ವಿಶ್ವಕಪ್​ ನಡೆಯಬೇಕಿದ್ದ ಅವಧಿಯಲ್ಲಿ ಐಪಿಎಲ್ ಯಾಕೆ ನಡೆಸಬಾರದು ಅನ್ನೋ ಯೋಚನೆ ಬಿಸಿಸಿಐ ತಲೆಯಲ್ಲಿದೆ. ಆದ್ರೆ ಕೊರೋನಾದ ಕಠಿಣ ಪರಿಸ್ಥತಿಯಲ್ಲಿ ಪ್ರತಿವರ್ಷದಂತೆ ಸುಧೀರ್ಘ ಸರಣಿಯನ್ನು ನಡೆಸೋಕೆ ಸಾಧ್ಯವಿಲ್ಲ. ಆದ್ರಿಂದ ಕಡಿಮೆ ಮ್ಯಾಚ್ ಗಳ ಸಂಖ್ಯೆ ಕಮ್ಮಿ ಮಾಡಿ ಟೂರ್ನಿ ನಡೆಸೋ ಸಾಧ್ಯತೆ ಇದೆ. ದುಬೈನಲ್ಲಿ ನಡೆಯುತ್ತಾ IPL ಸೀಸನ್ 13? ಯುಇಎ ಸರ್ಕಾರ  ತಮ್ಮಲ್ಲಿ ಐಪಿಎಲ್ ನಡೆಸಲು ಅವಕಾಶ ನೀಡುವುದಾಗಿ ಹೇಳಿದೆಯಂತೆ. ಈ ಬಗ್ಗೆ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.  ಯುಇಎ ಸರ್ಕಾರ ಐಪಿಎಲ್ ಅನ್ನು ಅಲ್ಲಿ ನಡೆಸುವಂತೆ ಹೇಳಿದೆ. ಅಲ್ಲಿನ ಸೌಲಭ್ಯಗಳು ಮತ್ತು ಪರಿಸ್ಥಿತಿ ಬಗ್ಗೆ ಅವಲೋಕಿಸ್ತಿದ್ದೇವೆ. ವಾರದೊಳಗೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ಸೇರಿ ಮುಂದಿನ ಐಪಿಎಲ್ ಟೂರ್ನಿ ಬಗ್ಗೆ ಚರ್ಚೆ ನಡೆಸಲಿದೆ ಅಂತ ತಿಳಿಸಿದ್ದಾರೆ. ಐಪಿಎಲ್ ನಡೆಸಲು ಸದ್ಯ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಕೇಂದ್ರ ಸರ್ಕಾರದ ಅನುಮತಿಯನ್ನು, ಆಟಗಾರರ ವೀಸಾ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಕ್ಲಯರೆನ್ಸ್​​ ಸರ್ಟಿಫಿಕೇಟ್ ಪಡೆಬೇಕಾಗಿದೆ. ಕೇಂದ್ರದ ಗ್ರೀನ್ ಸಿಗ್ನಲ್ ಬಳಿಕ ಅಧಿಕೃತ ವೇಳಾಪಟ್ಟಿ ಮತ್ತಿತರ ಮಾಹಿತಿ ಸಿಗಲಿದೆ.

RELATED ARTICLES

Related Articles

TRENDING ARTICLES