Thursday, January 16, 2025

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣಿಗೆ ಶರಣು

ವಿಜಯಪುರ : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊರ್ವ ನೇಣಿಗೆ ಶರಣಾದ ಘಟನೆ ವಿಜಯಪುರ ನಗರದ ಇಬ್ರಾಹಿಂಪುರ ಬಡಾವಣೆ ಬಳಿ ನಡೆದಿದೆ. ಲಕ್ಷ್ಮಣ ಕಾಂಬ್ಳೆ (42) ನೇಣಿಗೆ ಶರಣಾದ ವ್ಯಕ್ತಿಯಾಗಿದ್ದು, ಈತ ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ, ಇದರಿಂದಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳಿಯರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಪ್ರತಿ ದಿನ ಈತ ಬಡಾವಣೆಯ ಬಳಿಯ ಮೆಡಿಕಲ್ ಶಾಪ್ ಒಂದರ ಮುಂದೆ ಮಲಗುತ್ತಿದ್ದ, ಎಂದಿನಂತೆ ಮಲಗಿದವ ನಿನ್ನೆ ತಡ ರಾತ್ರಿ ಮೆಡಿಕಲ್ ಶಾಪ್ ಪಕ್ಕದ ಮನೆಯೊಂದರ ಮುಂದೆ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಜಲನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

RELATED ARTICLES

Related Articles

TRENDING ARTICLES