ಕಲಬುರಗಿ : ಮನೆಯಲ್ಲಿ ಯಾರಿಗಾದರು ಸೊಂಕು ತಗುಲಿದರೆ ಮಾರುದ್ದ ಸರಿಯುವ ದಿನಗಳಲ್ಲಿ, ಕಲಬುರಗಿಯ ಫರಹತ್ತಬಾದ್ ಪೊಲೀಸ್ ಠಾಣೆ ಪಿಎಸ್‌ಐ ಯಶೋಧಾ ಕಟ್ಟೆ ಸೊಂಕಿತರ ಕುಟುಂಬಕ್ಕೆ ಆಸರೆಯಾಗಿದ್ದಾರೆ.. ಅಷ್ಟಕ್ಕೂ ಫರಹತ್ತಬಾದ್ ಗ್ರಾಮದ ಸೊಂಕಿತ ಕುಟುಂಬವು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿತ್ತು.. ಆದರೆ ನೆರೆಹೊರೆಯವರು ಮಾತ್ರ ಸೊಂಕಿತ ಕುಟುಂಬಕ್ಕೆ ಕುಡಿಯುವ ನೀರು ಕೊಡೊದು ದೂರದ ಮಾತು, ಅವರ ಹತ್ರ ಕೂಡ ಸುಳಿದಿಲ್ಲ.. ಈ ವೇಳೆ ಪಿಎಸ್‌ಐ ಯಶೋಧಾ ಕಟ್ಕೆ, ತಮ್ಮದೇ ಪೊಲೀಸ್ ಠಾಣೆ ಆವರಣದಿಂದ ಸೊಂಕಿತ ಕುಟುಂಬದ ಮನೆಗೆ ಪೈಪ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಲ್ಲದೇ ಆಹಾರದ ಕಿಟ್‌ಗಳನ್ನ ಒದಗಿಸಿ ಖಾಕಿಯೊಳಗಿನ ಮಾನವೀಯತೆಯನ್ನ ಎತ್ತಿ ತೋರಿಸಿದ್ದಾರೆ.. ಅಲ್ಲದೇ ಸೊಂಕಿತ ಕುಟುಂಬದ ಮನೆಗೆ ತೆರಳಿ ಸದಸ್ಯರಿಗೆ ಧೈರ್ಯ ತುಂಬಿ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.. ಸದ್ಯ ಪಿಎಸ್‌ಐ ಯಶೋಧಾ ಕಟ್ಕೆಯವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ..