Thursday, January 16, 2025

ಶಂಕಿತ ಕೊರೊನಾಗೆ ಪುಟ್ಟ ಕಂದಮ್ಮ ಬಲಿ; ಬಜರಂಗದಳ ‘ಕೋವಿಡ್ ಟೀಂ’ ನಿಂದ ಅಂತ್ಯ ಸಂಸ್ಕಾರ

ಮಂಗಳೂರು: ಶಂಕಿತ ಕೊರೊನಾ ಮಹಾಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುಟ್ಟ ಕಂದಮ್ಮ‌ ಬಲಿಯಾಗಿದ್ದು, ವಿಶ್ವ ಹಿಂದೂ ಪರಿಷತ್ ಬಜರಂಗದಳದ ‘ಕೋವಿಡ್ ಟೀಂ’ ಅಂತ್ಯ ಸಂಸ್ಕಾರ ನಡೆಸಿ ಮಾದರಿಯೆನಿಸಿದೆ. ಕರಾವಳಿಯಲ್ಲಿ ಈಗಾಗಲೇ ಕೊರೊನಾ ಸೋಂಕು ಭಾರೀ ಹೆಚ್ಚಳವಾಗಿದ್ದು, ಮರಣ ಪ್ರಮಾಣವೂ ತೀವ್ರ ಗತಿಯಲ್ಲಿ ಏರಿಕೆ ಆಗಿದೆ‌‌. ಅಂತೆಯೇ ಶನಿವಾರ ಪುತ್ತೂರಿನ ದಂಪತಿಗಳಿಗೆ ಸೇರಿದ ಎರಡು ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿದೆ. ಜ್ವರ ಹಾಗೂ ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಹೆಣ್ಣು ಮಗುವನ್ನ ಮಂಗಳೂರಿನ ಸರಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಗುವಲ್ಲಿ ಕೊರೊನಾ ಕೂಡಾ ದೃಢಪಟ್ಟಿತ್ತು. ಶನಿವಾರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.‌ ಆದರೆ ತಜ್ಞ ವೈದ್ಯರ ತಂಡ ಮಗುವಿನ ಸಾವಿಗೆ ನಿಜವಾದ ಕಾರಣವೇನಿರಬಹುದು? ಅನ್ನೋ ತಪಾಸಣೆಗೆ ಇಳಿದಿದೆ. ಕಾರಣ, ಮಗುವಿನಲ್ಲಿದ್ದ ಇನ್ನಿತರ ಸಮಸ್ಯೆಗಳು ಸಾವಿಗೆ ಕಾರಣವಾಗಿರಬಹುದೇ ಅನ್ನೋದಾಗಿ ತಂಡವು ಅಧ್ಯಯನ ನಡೆಸಲಿದೆ.‌

ಕೋವಿಡ್ ನಿಯಮಾವಳಿಯಂತೆ ಕಂದಮ್ಮನಿಗೆ ಸದ್ಗತಿ ಕಲ್ಪಿಸಿದ ಬಜರಂಗದಳ

ಆದರೆ ಮೃತಪಟ್ಟ ಕಂದಮ್ಮನನ್ನ ಕೋವಿಡ್ ನಿಯಮಾವಳಿಯಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸದಸ್ಯರು ನೆರವೇರಿಸಿ ಮಾದರಿಯಾಗಿದ್ದಾರೆ‌. ಮಂಗಳೂರಿನ ನಂದಿಗುಡ್ಡೆ ಸಾರ್ವಜನಿಕ ರುದ್ರಭೂಮಿಯಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಬಜರಂಗದಳ ‘ಕೋವಿಡ್ ಟೀಂ’ ನ ಹತ್ತು ಮಂದಿ ಸದಸ್ಯರು ಅಂತ್ಯ ಸಂಸ್ಕಾರ ನಡೆಸಿದ್ದಾರೆ.‌ ಸದಸ್ಯರು ಪಿಪಿಇ ಕಿಟ್ ಧರಿಸಿ, ಅಗತ್ಯ ಸುರಕ್ಷತಾ ಕ್ರಮವನ್ನೂ ಪಾಲಿಸಿದ್ದರು.

ಒಟ್ಟಿನಲ್ಲಿ ಕರಾವಳಿಯಲ್ಲಿ ಕೋವಿಡ್ ಸಂಧಿಗ್ಧತೆ ನಡುವೆಯೂ ಧಾರ್ಮಿಕ ಸಂಘಟನೆಗಳು ಮಾದರಿ ಕೆಲಸಕ್ಕೆ ಮುಂದಾಗುತ್ತಿರುವುದು ಗಮನಾರ್ಹ ವಿಚಾರವಾಗಿದೆ‌. ಈಗಾಗಲೇ ಮುಸ್ಲಿಂ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದ ಹತಕ್ಕೂ ಅಧಿಕ ಮುಸ್ಲಿಮರ ದಫನ್ ಕಾರ್ಯ ನಡೆಸಿ ಮಾದರಿಯೆನಿಸಿಕೊಂಡಿದೆ.

RELATED ARTICLES

Related Articles

TRENDING ARTICLES