ಹಾಸನ : ಸೋಂಕಿತ ಮಹಿಳೆ ಸಂಪರ್ಕಿತರು ಆಸ್ಪತ್ರೆಗೆ ಬಂದಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆ ಬಂದ್ ಮಾಡಲಾಗಿದ್ದು, ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಿರುವಿದರಿಂದ ಯಾರನ್ನೂ ಪರೀಕ್ಷೆ ಮಾಡುವುದಿಲ್ಲವೆಂದು ಬೋರ್ಡ್ ಕೂಡಾ ಹಾಕಲಾಗಿದೆ. ನಿನ್ನೆ ಸಂಜೆಯಿಂದ, ನಾಳೆ ಸಂಜೆಯವರೆಗೂ ಸೀಲ್ ಡೌನ್ ಮಾಡಲಾಗಿದೆ. ಸಿಬ್ಬಂದಿಗಳು ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡುತ್ತಿದ್ದು, ಆಸ್ಪತ್ರೆಯ ಆವರಣ ಹಾಗೂ ಸುತ್ತಮುತ್ತ ಔಷಧಿ ಸಿಂಪಡಣೆ ಮಾಡುತ್ತಿದ್ದಾರೆ. ಒಂದು ವಾರದ ಅಂತರದಲ್ಲಿ ಹಿರೀಸಾವೆ ಗ್ರಾಮದಲ್ಲಿ ಎರಡು ಹಾಗೂ ಹೋಬಳಿಯಲ್ಲಿ ಒಂದು ಪಾಸಿಟಿವ್ ಸೇರಿ ಒಟ್ಟು ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಹಿರೀಸಾವೆ ಗ್ರಾಮ ಪಂಚಾಯತ್ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯಿಂದ ಸೀಲ್ ಡೌನ್ ತೀರ್ಮಾನ ಕೈಗೊಳ್ಳಲಾಗಿದೆ.