Sunday, January 19, 2025

“ಹೆಚ್ಚು ರನ್ ಗಳಿಸಿದ್ರೂ ನನ್ನ ಟೀಮ್​ನಿಂದ ಹೊರಗಿಟ್ರು’’  :  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಎಲ್ರಿಗೂ ಗೊತ್ತಿರೋ ವಿಷಯವೇ… ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್​ಗೆ ನೀಡಿದ ಕೊಡುಗೆ ಅಷ್ಟಿಷ್ಟಲ್ಲ.. ಕ್ರಿಕೆಟ್ ಆಟಗಾರನಾಗಿ, ಕ್ಯಾಪ್ಟನ್ ಆಗಿ ಆ ದಿನಗಳಲ್ಲಿ ಗಂಗೂಲಿ ನೀಡಿದ್ದ ಕೊಡುಗೆ ನಿಜಕ್ಕೂ ಸ್ಮರಣೀಯ.  ಭಾರತೀಯ ಕ್ರಿಕೆಟ್​ಗೆ ಹೊಸ ರೂಪಕೊಟ್ಟವರು ಇದೇ ಬಂಗಾಳದ ಹುಲಿ..!

ಇವತ್ತು ಅವರು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್​ ಇನ್ ಇಂಡಿಯಾ.. ಅರ್ಥಾತ್ BCCIನ ಅಧ್ಯಕ್ಷರು.. ಆದ್ರೆ ಅವರ ಕ್ರಿಕೆಟ್ ವೃತ್ತಿಬದುಕಿನ ಕೊನೆಗೆ ಕೊನೆಗೆ ಸಾಕಷ್ಟು ಅವಮಾನಗಳನ್ನು ಎದುರಿಸಿದ್ರು..  ಪ್ರಬಲ ತಂಡ ಕಟ್ಟಿದ್ದ ಅವರೇ ತಂಡದಿಂದ ಹೊರಗುಳಿಯಬೇಕಾಗಿ ಬಂದಿತ್ತು….ಆ ದಿನಗಳನ್ನುಸಹ ಯಾರೂ ಮರೆತಿಲ್ಲ…ಇದೀಗ ಸ್ವತಃ ಗಂಗೂಲಿ ಆ ನೋವನ್ನು, ಬೇಸರನ್ನು ಹಂಚಿಕೊಂಡಿದ್ದಾರೆ.

2007ರಲ್ಲಿ ಟೀಮ್ ಇಂಡಿಯಾದಿಂದ ನನ್ನನ್ನು ಕೈ ಬಿಟ್ಟಿದ್ದು ಈಗಲೂ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಆ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಮಾಡಿದ್ರೂ ತಂಡದಿಂದ ದೂರವಿಟ್ರು ಅಂತ ಗಂಗೂಲಿ ಬೇಸರ ವ್ಯಕ್ತಪಡಿಸಿದ್ದಾರೆ.

2003ರಲ್ಲಿ ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್​ ಫೈನಲ್ ಪ್ರವೇಶಿಸಿತ್ತು. ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಆ ವಿಶ್ವಕಪ್ ಬಳಿಕ., 2005ರ ಹೊತ್ತಿಗೆ ಗ್ರೆಗ್ ಚಾಪೆಲ್ ತಂಡದ ಕೋಚ್ ಆದ್ರು, ಅಷ್ಟೊತ್ತಿಗೆ ಗಂಗೂಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.. ಅಷ್ಟೇ ಅಲ್ದೆ ತಂಡದಿಂದ ಕೂಡ ಹೊರಗಿಡಲಾಗಿತ್ತು. ಆದ್ರೆ, ಗಂಗೂಲಿ ಛಲಬಿಡ್ಲಿಲ್ಲ, 2006ರಲ್ಲಿ ದಕ್ಷಿಣಾ ಆಫ್ರಿಕಾ ವಿರುದ್ಧದ ಸರಣಿಗೆ ಕಮ್​ಬ್ಯಾಕ್ ಆದ್ರು.  

2007ರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ನೇತೃತ್ವದ ವಿಶ್ವಕಪ್ ತಂಡದಲ್ಲೂ ಗಂಗೂಲಿ ಬ್ಯಾಟ್ ಬೀಸಿದ್ರು. ಆ ವಿಶ್ವಕಪ್​ನಲ್ಲಿ ಭಾರತ ಮೊದಲ ಹಂತದಲ್ಲೇ ಟೂರ್ನಿಯಿಂದ ಹೊರಬಿತ್ತು. ನಂತರದ ದಿನಗಳಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಗಂಗೂಲಿ ಮತ್ತು ದ್ರಾವಿಡ್ ರನ್ನು ತಂಡದ ಆಯ್ಕೆಗೆ ಕಡೆಗಾಣಿಸಲಾಯ್ತು. 2007-08ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ಏಕದಿನ ತಂಡಕ್ಕೆ ದ್ರಾವಿಡ್ ಮತ್ತು ಗಂಗೂಲಿಯನ್ನು ಕೈಬಿಡಲಾಗಿತ್ತು. ಆಗ ಧೋನಿ ತಂಡದ ನಾಯಕತ್ವವಹಿಸಿಕೊಂಡಿದ್ರು.. ಅದಾಗಿ ಹೆಚ್ಚು-ಕಮ್ಮಿ ವರ್ಷದ ಬಳಿಕ ಗಂಗೂಲಿ ನಿವೃತ್ತಿ ಘೋಷಿಸಿದ್ರು.

ಈ ಬಗ್ಗೆ ಗಂಗೂಲಿ ಮೌನ ಮುರಿದಿದ್ದಾರೆ.  ಸಂದರ್ಶನವೊಂದರಲ್ಲಿ ಮಾತನಾಡಿದ ಗಂಗೂಲಿ, ‘ಇದು ಖಂಡಿತಾ ನಂಬಲಾಗದ್ದು.ಆ ಕ್ಯಾಲೆಂಡರ್ ವರ್ಷದಲ್ಲಿ ನಾನು ಅತ್ಯಧಿಕ ರನ್ ಗಳಿಸಿದ್ರೂ ಕೂಡ 2007ರಲ್ಲಿ ನನ್ನನ್ನು ತಂಡದಿಂದ ಕೈಬಿಡಲಾಯ್ತು. ನೀವೆಷ್ಟೇ ಪ್ರತಿಭಾವಂತಾಗಿದ್ದರೂ ನಿಮ್ಮಿಂದ ವೇದಿಕೆಯನ್ನೇ ಕಿತ್ತುಕೊಂಡ್ರೆ, ನಿಮ್ಮ ಪ್ರತಿಭೆಯನ್ನು ನೀವು ಹೇಗೆ ಸಾಬೀತುಪಡಿಸುತ್ತೀರಿ? ಇದು ಬೇರ್ಯಾರಿಗೂ ಅಲ್ಲ, ಸ್ವತಃ ನಂಗೇ ಈ ಅನುಭವವಾಗಿತ್ತು. ಅಂದು ನಂಗೆ ಏಕದಿನದಲ್ಲಿ ಇನ್ನೆರಡು ಸರಣಿಗಳಲ್ಲಿ ಆಡಲು ಅವಕಾಶ ನೀಡಿದ್ರೆ ನಾನು ಇನ್ನೂ ಹೆಚ್ಚಿಗೆ ರನ್ ಗಳಿಸ್ತಿದ್ದೆ, ನಾನೊಂದು ವೇಳೆ ನಾಗ್ಪುರದಲ್ಲಿ (ನವೆಂಬರ್ 2008) ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸದಿದ್ದರೆ ಮುಂದಿನ ಎರಡು ಟೆಸ್ಟ್ ಸರಣಿಗಳಲ್ಲೂ ಹೆಚ್ಚಿನ ರನ್ ಗಳಿಸುತ್ತಿದ್ದೆ’’ಅಂತ ಹೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES