ಚಿಕ್ಕಮಗಳೂರು : ಕೊರೋನಾ ಸೋಂಕಿತೆ ತುಂಬು ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿರೋ ಘಟನೆ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ದುರಾದೃಷ್ಟವಶಾತ್ ಕೊರೋನಾ ಸೋಂಕಿತೆ ಗರ್ಭಿಣಿಯ ಅಮ್ಮ ಅದೇ ಕೊರೋನಾದಿಂದ ತೀರಿಕೊಂಡಿದ್ದು ಅಮ್ಮ ತೀರಿಕೊಂಡ ನೋವಿನಲ್ಲೂ ಹೆಣ್ಣು ಮಗುವಿಗೆ ಜನ್ಮ ನೀಡಿರೋ ಗರ್ಭಿಣಿ ನನ್ನ ಅಮ್ಮ ನನ್ನ ಹೊಟ್ಟೆಯಲ್ಲೇ ಹುಟ್ಟಿದ್ದಾಳೆಂದು ಗರ್ಭಿಣಿ ಭಾವಿಸಿದ್ದಾಳೆ. ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ 23 ವರ್ಷದ ತುಂಬು ಗರ್ಭಿಣಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ ಆಕೆಯನ್ನು ನಿನ್ನೆ ಚಿಕ್ಕಮಗಳೂರಿನ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗರ್ಭಿಣಿಯ ತಾಯಿಗೆ ಶೀತ, ಕೆಮ್ಮು, ಜ್ವರ ಎಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೊರೋನ ಪಾಸಿಟಿವ್ ಇರುವುದು ದೃಢವಾದ ಬಳಿಕ ಅಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಇಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಈ ಮಧ್ಯೆ ತುಂಬು ಗರ್ಭಿಣಿ ಅಮ್ಮನನ್ನ ಕಳೆದುಕೊಂಡ ನೋವಿನ ಮಧ್ಯೆಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿದ್ದು ವೈದ್ಯರು ಇಬ್ಬರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಅಮ್ಮನನ್ನು ಕಳೆದುಕೊಂಡ ನೋವಿನಲ್ಲಿರೋ ತುಂಬು ಗರ್ಭಿಣಿ ನನ್ನ ಅಮ್ಮ ನನ್ನ ಹೊಟ್ಟೆಯಲ್ಲಿ ಹುಟ್ಟಿದ್ದಾರೆ ಎಂದು ಭಾವಿಸಿದ್ದಾರೆ…
ಸಚಿನ್ ಶೆಟ್ಟಿ ಚಿಕ್ಕಮಗಳೂರು…