ವಿಜಯಪುರ : ಗುಮ್ಮಟ ನಗರಿಯಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಸಾವಿರದ ಅಂಚಿನಲ್ಲಿ ಇರುವ ಕೊರೋನಾ ಹರಡುವುದನ್ನು ತಡೆಗಟ್ಟಲು ವಿಜಯಪುರ ಜಿಲ್ಲಾಡಳಿತ ಹೊಸ ದಾರಿ ಕಂಡುಕೊಂಡಿದೆ. ವಿಜಯಪುರದಲ್ಲಿ ಇನ್ನು ಮುಂದೆ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗೆ ಬಂದರೆ ಇನ್ಸ್ಟಿಟ್ಯೂಷನ್ ಕೊರಂಟೈನ್ ಮಾಡಲು ವಿಜಯಪುರ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹೊಸ ಆದೇಶ ಹೊರಡಿಸಿದ್ದಾರೆ. ಇನ್ನು ಸರ್ಕಾರ ಆದೇಶದನ್ವಯ ಜಿಲ್ಲೆಯನ್ನು ಸದ್ಯ ಲಾಕ್ ಡೌನ್ ಮಾಡಲ್ಲ, ಆದರೆ 60 ವರ್ಷ ಮೇಲ್ಪಟ್ಟವರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬಂದರೆ ಮೊದಲು ಬಾರಿ ವಾರ್ನ್ ಮಾಡಲಾಗುವದು ಎರಡನೇ ಬಾರಿ ಮತ್ತೆ ಹೊರ ಬಂದರೆ ಇನ್ಸ್ಟಿಟ್ಯೂಷನ್ ಕೊರಂಟೈನ್ ಗೆ ಶಿಪ್ಟ ಮಾಡಲಾಗುವದು ಎಂದರು. ಇನ್ನೂ ಮಹಾನಗರ ಪಾಲಿಕೆ ಸಿಬ್ಬಂದಿಗಳು ಈ ಕುರಿತು ನಿಗಾ ವಹಿಸುತ್ತಾರೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ…