ಮಂಡ್ಯ : ಕೊರೋನಾ ಲಾಕ್ ಡೌನ್ ನಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳೂ ಕೂಡ ತಮ್ಮೆಲ್ಲ ಸ್ಟಾರ್ ಗಿರಿಯನ್ನ ಬದಿಗಿಟ್ಟು ಗೂಡು ಸೇರ್ಕೊಂಡಿದ್ದಾರೆ.
ನಿತ್ಯವೂ ಶೂಟಿಂಗ್, ಪ್ರೋಗ್ರಾಮಿಂಗ್ ಅಂತೆಲ್ಲಾ ಬ್ಯುಸಿ ಇದ್ದ ನಟರೆಲ್ಲ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಮನೆಯಲ್ಲೇ ಕೂರುವಂತಾಗಿದೆ.
ಅಂತೆಯೇ, ಕನ್ನಡದ ಕಾಮಿಡಿ ಕಿಲಾಡಿಗಳು ಖ್ಯಾತಿಯ, ಜನಪ್ರಿಯ ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಕೂಡ ತಮ್ಮೆಲ್ಲ ಶೂಟಿಂಗ್, ಪ್ರೋಗ್ರಾಮ್ ಗಳನ್ನ ಸ್ಥಗಿತ ಮಾಡಿ ಊರು ಸೇರಿದ್ದಾರೆ.
ತಮ್ಮ ಹುಟ್ಟೂರು ಮಂಡ್ಯ ಕೆ.ಆರ್.ಪೇಟೆ ಮನೆಯಲ್ಲಿ ಕುಟುಂಬ ಸದಸ್ಯರ ಜೊತೆ ಲಾಕ್ ಡೌನ್ ಸಮಯ ಕಳೆಯುತ್ತಿದ್ದಾರೆ.
ಈ ನಡುವೆ, ಶಿವರಾಜ್ ಕೆ.ಆರ್.ಪೇಟೆ ಅವರು ಸ್ವತಃ ತಮ್ಮ ಮನೆಯಲ್ಲೇ ಅಪ್ಪನಿಗೆ ಶೇವ್ ಮಾಡಿಕೊಟ್ಟಿದ್ದಾರೆ.
ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಅಪ್ಪನಿಗೆ ಶೇವ್ ಮಾಡಿಕೊಡ್ತಿರೋ ಫೋಟೋ ಅಪ್ಲೋಡ್ ಮಾಡಿಕೊಂಡಿರುವ ನಟ ಶಿವರಾಜ್ ಕೆ.ಆರ್.ಪೇಟೆ, ನನ್ನಪ್ಪ.. ಚಿಕ್ಕಂದಿನಲ್ಲಿ ನಂಗೆ ಕಟ್ಟಿಂಗ್ ಮಾಡ್ಸಕ್ಕೆ ಶಾಪ್ ಗೆ ಕರ್ಕೊಂಡ್ ಹೋಗ್ತಿದ್ರು.. ಈಗ ಅವ್ರನ್ನ ಶಾಪ್ ಗೆ ಕರ್ಕೊಂಡ್ ಹೋಗೋಕೆ ಭಯ.. ಅದಕ್ಕೆ ನಾನೇ ಮಾಡ್ದೆ.. ಅಂತಾನೂ ಬರೆದುಕೊಂಡಿದ್ದಾರೆ.
ಲಾಕ್ ಡೌನ್ ಎಫೆಕ್ಟ್; ಮನೆಯಲ್ಲೇ ತಂದೆಗೆ ಸ್ವತಃ ಶೇವ್ ಮಾಡಿದ ನಟ..
TRENDING ARTICLES