ಬಾಗಲಕೋಟೆ : ದೇಶದಲ್ಲಿ ಕೊರೊನಾ ನಿರ್ವಹಣೆಯಲ್ಲಿ ಪಿಎಂ ನರೇಂದ್ರ ಮೋದಿ, ರಾಜ್ಯದಲ್ಲಿ ಸಿಎಂ ಬಿಎಸ್ ವೈ ವಿಫಲರಾಗಿದ್ದಾರೆ. ಫೆಬ್ರವರಿಯಿಂದಲೇ ವಿದೇಶಿದಿಂದ ಬಂದವರನ್ನು ವಿಮಾನ ನಿಲ್ದಾಣದಿಂದಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದರೆ ಲಾಕ್ಡೌನ್, ಸೀಲ್ ಡೌನ್ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬಾಗಲಕೋಟೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ .ಆರ್. ಪಾಟೀಲ್ ಹೇಳಿದ್ರು.ಮಾರ್ಚ್ 22ರಿಂದ ಲಾಕ್ ಡೌನ್ ಮಾಡಿದರು. ಲಾಕ್ ಡೌನ್ ಸಡಿಲಿಕೆ ನಂತರ ಇದೀಗ ತೀವ್ರಗತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಬೆಂಗಳೂರು ಸೇರಿ 7 ಜಿಲ್ಲೆ ಅಲ್ಪಾವಧಿ ಲಾಕ್ ಡೌನ್ ಮಾಡಿದ್ದಾರೆ. ಅಲ್ಪಾವಧಿ ಲಾಕ್ ಡೌನ್ ದಿಂದ ಖಂಡಿತವಾಗಿ ಕೊರೊನಾ ನಿಯಂತ್ರಣ ಆಗೋದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಕೊರೊನಾ ನಿಯಂತ್ರಣದ ವೈಫಲ್ಯದ ಜವಾಬ್ದಾರಿಯನ್ನು ಕೇಂದ್ರ, ರಾಜ್ಯ ಸರ್ಕಾರ ಹೊರಬೇಕು. ನಮ್ಮ ದೇಶದ ಆರ್ಥಿಕ ಪರಿಸ್ಥಿತಿ 50 ವರ್ಷದ ಹಿಂದಕ್ಕೆ ಹೋಗಿದೆ. ಇಡೀ ರಾಜ್ಯದ ಜನ ಭಯಭೀತ ರಾಗಿದ್ದಾರೆ. ಬೆಂಗಳೂರು ಪರಿಸ್ಥಿತಿ ಹದಗೆಟ್ಟು ಹೋಗಿದೆ. ಬೆಂಗಳೂರಿಗೆ ಹೋಗಲು ಭಯವಾಗುತ್ತಿದೆ.ಇನ್ನು
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಎಸ್ ಆರ್ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದು, ಕೃಷಿಕರಲ್ಲ ದವರು ಇದೀಗ ಭೂಮಿ, ಮಣ್ಣನ್ನು ಬಿಡುತ್ತಿಲ್ಲ. ಅಂತವರಿಗೆ ಭೂ ಖರೀದಿಗೆ ಅವಕಾಶ ನೀಡಿದ್ದಾರೆ. ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿ ಸುಗ್ರಿವಾಜ್ಞೆ ಹೊರಡಿಸಿದ್ದಾರೆ. ಬಂಡವಾಳಶಾಹಿ, ಭ್ರಷ್ಟಾಚಾರದಿಂದ ಹಣ ಗಳಿಸಿದ ರಾಜಕಾರಣಿಗಳು, ಅಧಿಕಾರಿಗಳು ಭೂಮಿ ಖರೀದಿಗೆ ಅವಕಾಶ ನೀಡಿದ್ದಾರೆ. ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತನೆಗೆ ತಿದ್ದುಪಡಿ ಕಾಯ್ದೆ ಅವಕಾಶ ನೀಡಿದಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಎಸ್ ಆರ್ ಪಿ ಟೀಕಾಪ್ರಹಾರ ಮಾಡಿದ್ರು.
ಕೊರೋನಾ ನಿಯಂತ್ರಣದಲ್ಲಿ ಪಿಎಂ, ಸಿಎಂ ವಿಫಲ – ಕಾಂಗ್ರೆಸ್ ನಾಯಕ ಎಸ್.ಆರ್. ಪಾಟೀಲ್ ವಾಗ್ದಾಳಿ
TRENDING ARTICLES