Thursday, January 16, 2025

ಗದಗ : ಎಸ್ಪಿ ಕಚೇರಿಗೂ ಎಂಟ್ರಿ ಕೊಡ್ತಾ ಕೊರೋನಾ ?

ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಜಿಲ್ಲೆಯ ಪೊಲೀಸ್ ಪೇದೆಗಳಿಗೆ ಸೋಂಕು ಹರಡುತ್ತಿದೆ. ಇದೀಗ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗದ ಮೂವರು ಸೇರಿದಂತೆ ೭ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದ್ದರಿಂದ ಜಿಲ್ಲೆಯ ಎಸ್ಪಿ ಕಚೇರಿಯನ್ನು ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಲಾಗಿದೆ. ಕಚೇರಿಯ ಕಂಟ್ರೋಲ್ ರೂಂ ಸಿಬ್ಬಂದಿ ಹೊರತುಪಡಿಸಿ ಉಳಿದ ಎಲ್ಲ ಸಿಬ್ಬಂದಿಗಳಿಗೂ ಕಚೇರಿ ಪ್ರವೇಶ ನಿರ್ಭಂದಿಸಲಾಗಿದೆ.
ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ಸೈಬರ್ ಕ್ರೈಂ ವಿಭಾಗದ ಮೂವರು ಹಾಗೂ ಬೆಟಗೇರಿಯ ಇಬ್ಬರು ಹಾಗೂ ಶಹರ ಮತ್ತು ಸಂಚಾರಿ ಪೊಲೀಸ್ ಠಾಣೆಯ ತಲಾ ಓರ್ವ ಪೇದೆಗೆ ಕೊರೊನಾ ಸೋಂಕು ಖಚಿತವಾಗೋ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಂಚಾರಿ ಪೊಲೀಸ್ ಠಾಣೆಯನ್ನು ಪೊಲೀಸ್ ಕಲ್ಯಾಣ ಮಂಟಪಕ್ಕೆ, ಶಹರ ಮತ್ತು ಗೆಳತಿ ಪೊಲೀಸ್ ಠಾಣೆ ರಾಜೀವಗಾಂಧಿ ನಗರ ಠಾಣೆಗೆ ಹಾಗೂ ಬೆಟಗೇರಿ ಪೊಲೀಸ್ ಠಾಣೆಯನ್ನು ಹೆಲ್ತ್ ಕ್ಯಾಂಪ್ ಸಮೀಪದ ಪೊಲೀಸ್ ಕ್ಯಾಂಟೀನ್ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.ಇಷ್ಟು ದಿನಗಳ ಕಾಲ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಿದ ಪೊಲಿಸ್ ಸಿಬ್ಬಂದಿಗಳಿಗೂ ವೈರಸ್ ಮೆಲ್ಲನೆ ಎಂಟ್ರಿ ಕೊಡ್ತಿರೋದು ಆತಂಕಕ್ಕೀಡು ಮಾಡಿದೆ.

RELATED ARTICLES

Related Articles

TRENDING ARTICLES