ಮೈಸೂರು : ಮೈಸೂರಿನಲ್ಲಿ ಕೊರೊನಾ ನಿಯಂತ್ರಣ ಸವಾಲಾಗುತ್ತಿದೆ. ದಿನೇ ದಿನೇ ಕೊರೊನಾ ಸ್ಪೋಟವಾಗುತ್ತಿದೆ. ಪಾಸಿಟಿವ್ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿದ್ದಂತೆ ಲಾಕ್ ಡೌನ್ ಬಗ್ಗೆ ಚಿಂತನೆ ಆರಂಭವಾಗಿದೆ. ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಾಗಿದೆ. ಮೈಸೂರಿನಲ್ಲೂ ಜಾರಿಗೆ ತರುವ ಬಗ್ಗೆ ಚರ್ಚೆ ಆದರೂ ಜಿಲ್ಲಾಡಳಿತ ಸಧ್ಯಕ್ಕೆ ಕೈ ಬಿಟ್ಟಿದೆ. ಅದ್ರಲ್ಲೂ ಎನ್.ಆರ್.ಕ್ಷೇತ್ರದಲ್ಲಿ ಲಾಕ್ ಡೌನ್ ಜಾರಿಗೆ ತರುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಆಯ್ದ ಕ್ಷೇತ್ರಗಳನ್ನ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಸ್ಥಳೀಯ ಮುಖಂಡರ ನೆರವಿನಿಂದ ಲಾಕ್ ಡೌನ್ ಜಾರಿಗೆ ತರಲು ಗಂಭೀರ ಚಿಂತನೆ ನಡೆದಿದೆ. ಇದರ ಬೆನ್ನಲ್ಲೇ ಉದಯಗಿರಿಯ ಸ್ಥಳೀಯರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೈಯಲ್ಲಿ ಬೆತ್ತ ಹಿಡಿದು ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ಧರಿಸದೆ ಬಂದವರಿಗೆ ಬೆತ್ತ ತೋರಿಸಿ ಮಾಸ್ಕ್ ತೊಡಿಸಿ ಕಳಿಸುತ್ತಿದ್ದಾರೆ. ಸ್ಥಳೀಯ ಕಾರ್ಪೊರೇಟರ್ ಬಷೀರ್ ಅಹಮದ್ ರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಸುಲ್ತಾನ್ ರಸ್ತೆಯ ಏಕ್ ಮಿನಾರ್ ಮಸೀದಿ ಬಳಿ ವಿನೂತನವಾಗಿ ಜಾಗೃತಿ ಮೂಡಿಸಿದ್ದಾರೆ.
ಮಾಸ್ಕ್ ಧರಿಸದೇ ಬಂದವರಿಗೆ ಬೆತ್ತ ತೋರಿಸಿ ಜಾಗೃತಿ ಮೂಡಿಸಿ ಕ್ಷೇತ್ರದ ರಕ್ಷಣೆಗೆ ನಿಂತಿದ್ದಾರೆ.
ಎನ್.ಆರ್.ಕ್ಷೇತ್ರದಲ್ಲೇ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು ಹಾಗೂ
ಸಾವಿನ ಸಂಖ್ಯೆಯಲ್ಲಿ ಕ್ಷೇತ್ರ ಮುನ್ನುಗ್ಗುತ್ತಿರುವುದು ಕ್ಷೇತ್ರದ ಜನತೆಯ ನಿದ್ದೆ ಕೆಡಿಸಿದೆ. ಎನ್.ಆರ್.ಕ್ಷೇತ್ರ ಮಾತ್ರವಲ್ಲದೆ ಇಡೀ ಮೈಸೂರನ್ನೇ ಲಾಕ್ ಡೌನ್ ಮಾಡಿದರೆ ಒಳಿತು ಅಂತಾರೆ ಸ್ಥಳೀಯರು. ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳುವುದೋ ಕಾದು ನೋಡಬೇಕಿದೆ…
ಮಾಸ್ಕ್ ಧರಿಸದವರಿಗೆ ಬೆತ್ತ ಪ್ರದರ್ಶನ | ಮೈಸೂರಿನಲ್ಲಿ ವಿನೂತನ ಜಾಗೃತಿ
TRENDING ARTICLES