ಚಿಕ್ಕೋಡಿ: ಮಹಾರಾಷ್ಟ್ರಕ್ಕೆ ಅಂಟಿಕೊಂಡ ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೇ ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಜಿಲ್ಲೆಯ ಗಡಿಭಾಗದ ಐದು ತಾಲೂಕುಗಳು ಸಂಪೂರ್ಣ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ವಿವಿಧ ತಾಲೂಕುಗಳಲ್ಲಿ ಅಷ್ಟೇ ಅಲ್ಲದೆ ನಗರದಲ್ಲಿಯೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರ ವಾಸಿಗಳಲ್ಲಿ ಭೀತಿ ಮೂಡಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಸಂಖ್ಯೆ 561ಕ್ಕೆ ತಲುಪಿದ್ದು ಈಗಾಗಲೇ ಜಿಲ್ಲೆಯಲ್ಲಿ ಕೋರೊನಾದಿಂದ 14ಜನ ಸಾವನ್ನಪ್ಪಿದ್ದಾರೆ…. ನಿನ್ನೆ ಒಂದೇ ದಿನ 64 ಹೊಸ ಕೇಸ್ ಪತ್ತೆ ಆಗುವುದರ ಮೂಲಕ ನಿನ್ನೆ ಒಂದೇ ದಿನಕ್ಕೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಅಥಣಿ, ಕಾಗವಾಡ, ನಿಪ್ಪಾಣಿ, ಗೋಕಾಕ್ ಹಾಗೂ ಮೂಡಲಗಿ ತಾಲೂಕುಗಳನ್ನು ನಿನ್ನೆ ರಾತ್ರಿಯಿಂದ ಮುಂದಿನ 7 ದಿನಗಳ ಕಾಲ ಲಾಕ್ಡೌನ್ ಮಾಡಲಾಗಿದೆ. ಹಾಗೂ ಚಿಕ್ಕೋಡಿ ತಾಲೂಕು ಸ್ವಯಂ ಪ್ರೇರಿತವಾಗಿ ೮ ದಿನಗಳ ಲಾಕ್ ಡೌನ್ ಆಗಿದೆ..ಆದ್ದರಿಂದ ಜಿಲ್ಲೆಯ ೬ ತಾಲೂಕುಗಳು ವೈರಾಣು ತಡೆಯುವ ಪ್ರಯತ್ನದಲ್ಲಿವೆ … ಅಥಣಿ, ಕಾಗವಾಡ, ನಿಪ್ಪಾಣಿ,ಚಿಕ್ಕೋಡಿ ತಾಲೂಕುಗಳು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು, ಸೋಂಕು ವ್ಯಾಪ್ತಿಸುತ್ತಿರೋ ಹಿನ್ನೆಲೆಯಲ್ಲಿ ಜಿಲ್ಲಾಢಳಿತ ನಿರ್ಧಾರವನ್ನು ಕೈಗೊಂಡಿದೆ… ಬೆಳಿಗ್ಗೆಯಿಂದ ಯಾವುದೇ ವಾಹನ ಸಂಚಾರವಿಲ್ಲದೆ ಸ್ತಬ್ಧವಾದ ಈ ತಾಲೂಕುಗಳಲ್ಲಿ ತುರ್ತು ಸೇವೆ , ಆವಶ್ಯಕ ವಸ್ತು ಖರಿದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ..