ಟೀಮ್ ಇಂಡಿಯಾದ ನಾಯಕರಲ್ಲಿ ಯಾರು ಶ್ರೇಷ್ಠರು ಅನ್ನೋ ಪ್ರಶ್ನೆ ಆಗಾಗ ಕೇಳಿಬರುತ್ತಲೇ ಇರುತ್ತದೆ. ಅದರಲ್ಲಿ ಮುಂಚೂಣಿಯಲ್ಲಿರೋದು ಈಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಮಿಸ್ಟರ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹೆಸ್ರು.
ಈ ಇಬ್ಬರಲ್ಲಿ ಯಾರು ಶ್ರೇಷ್ಠರು ಅನ್ನೋ ಪ್ರಶ್ನೆಗಳು ಕೂಡ ಆಗಾಗ ಚರ್ಚೆ ಆಗುತ್ತಲೇ ಇರುತ್ತೆ. ಅದಕ್ಕೀಗ ಉತ್ತರ ಹುಡುಕೋ ಪ್ರಯತ್ನವನ್ನು ಸ್ಟಾರ್ ಸ್ಪೋರ್ಟ್ ಮಾಡಿದೆ. ಸ್ಟಾರ್ ಸ್ಪೋರ್ಟ್ಸ್ ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮಲ್ಲಿ ಸಮೀಕ್ಷೆ ನಡೆಸಲಾಗಿದೆ. ಅದರ ಫಲಿತಾಂಶ ಹೊರಬಂದಿದ್ದು, ಮಹೇಂದ್ರ ಸಿಂಗ್ ಧೋನಿ ಸೌರವ್ ಗಂಗೂಲಿಗಿಂತ ಮೇಲುಗೈ ಸಾಧಿಸಿದ್ದಾರೆ.
ಗ್ರೇಮ್ ಸ್ಮಿತ್, ಕುಮಾರ ಸಂಗಕ್ಕರ್ , ಗೌತಮ್ ಗಂಭೀರ್, ಇರ್ಫಾನ್ ಪಠಾಣ್ ಮತ್ತು ಕ್ರಿಸ್ ಶ್ರೀಕಾಂತ್ ಸಮೀಕ್ಷೆಯ ಪ್ಯಾನಲ್ ನಲ್ಲಿದ್ದರು. ಅವರ ಮತಗಳ ಆಧಾರದ ಮೇಲೆ ಶ್ರೇಷ್ಠ ನಾಯಕ ಯಾರೆಂದು ಘೋಷಿಸಲಾಯಿತು. 8 ಮಾನದಂಡಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿತ್ತು. ಪ್ರತಿ ವಿಭಾಗದಲ್ಲಿ ಪ್ಯಾನಲ್ ಸದಸ್ಯರ ಸರಾಸರಿ ಅಂಕಗಳನ್ನು ಪರಿಗಣಿಸಿ ಶ್ರೇಷ್ಠ ನಾಯಕ ಯಾರೆಂದು ಘೋಷಿಸಲಾಯಿತು. ನಾಯಕತ್ವದ ಸಂದರ್ಭದಲ್ಲಿನ ಬ್ಯಾಟಿಂಗ್ ವಿಚಾರದಲ್ಲಿ ಸೌರವ್ ಗಂಗೂಲಿಗಿಂತ ಧೋನಿ ಅರ್ಧ ಅಂಕ ಹೆಚ್ಚಿಗೆ ಪಡೆದರು. ಹೀಗೆ ಕೇವಲ ಅರ್ಧ ಅಂಕದಲ್ಲಿ ಧೋನಿ ಮುನ್ನಡೆ ಸಾಧಿಸಿದರು.
ಇನ್ನು ಟೆಸ್ಟ್ ನಲ್ಲಿ ಸೌರವ್ ಗಂಗೂಲಿಯೇ ಧೋನಿಗಿಂತ ಉತ್ತಮ ನಾಯಕ, ಸೀಮಿತ ಓವರ್ ಗಳಲ್ಲಿ ಧೋನಿ ಉತ್ತಮ ಕ್ಯಾಪ್ಟನ್ ಎಂದು ಕುಮಾರ ಸಂಗಕ್ಕರ ಮತ್ತು ಗ್ರೇಮ್ ಸ್ಮಿತ್ ಅಭಿಪ್ರಾಯಪಟ್ಟರು.