ದಾವಣಗೆರೆ : ಹೊನ್ನಾಳಿ ತಾಲೂಕಿನ ರಾಂಪುರದ ಮಠಾಧೀಶರಾದ ಹಾಲಸ್ವಾಮಿ (55) ಕೊರೋನಾ ಸೋಂಕಿನಿಂದ ಬಳಲಿ ನಿಧನರಾಗಿದ್ದಾರೆ. ಇವರು ಕಳೆದ ಮೂರು ದಿನಗಳಿಂದ ಕೊರೋನಾ ಸೋಂಕಿಗೆ, ನಗರದ ಮೆಗ್ಗಾನ್ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ರಾಂಪುರದ ಮಠಾಧೀಶರಾಗಿರುವ ಇವರು, ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಇವರು, ತೀವ್ರ ಜ್ವರ, ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಭಕ್ತರು ಎಷ್ಟೇ ವಿನಂತಿಸಿದರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು ಎನ್ನಲಾಗಿದ್ದು, ಜು. 9 ರಂದು, ಸ್ವಾಮೀಜಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಎಷ್ಟೇ ಪ್ರಯತ್ನಿಸಿದರು, ಚಿಕಿತ್ಸೆ ಫಲಿಸದೇ, ಉಸಿರಾಟದ ಸಮಸ್ಯೆ ತೀವ್ರಗೊಂಡು ಇಂದು ಸಂಜೆ ಸ್ವಾಮೀಜಿಗಳು ಮೃತಪಟ್ಟಿದ್ದಾರೆ. ಸ್ವಾಮೀಜಿಗಳು ಕೊವಿಡ್ ನಿಂದ ಸಾವುಕಂಡಿದ್ದು, ಅವರ ಸಾವಿರಾರು ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಸ್ವಾಮೀಜಿಗಳ ಅಂತ್ಯ ಸಂಸ್ಕಾರ ಕೋವಿಡ್ ಮಾರ್ಗಸೂಚಿಯಂತೆ ನಡೆಯಲಿದ್ದು, ಹೆಚ್ಚಿನ ಭಕ್ತಾಧಿಗಳು ಸೇರಲು ಅವಕಾಶ ಇಲ್ಲದೇ ಇರುವುದರಿಂದ ಭಕ್ತರು ಹೆಚ್ಚು ಸೇರುವಂತಿಲ್ಲವಾಗಿದೆ. ಜಿಲ್ಲಾಡಳಿತ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.