ಬಳ್ಳಾರಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಯುಷ್ ಇಲಾಖೆ ವೈದ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವೇತನ ತಾರತಮ್ಯ ನಿವಾರಣೆ ಮತ್ತು ಸೇವಾಭದ್ರತೆ ಸೇರಿದಂತೆ ಅವಶ್ಯ ಬೇಡಿಕೆಗಳನ್ನು ಈಡೇರಿಸುವಂತೆ ಅಯುಷ್ ವೈದ್ಯರು ಪಟ್ಟು ಹಿಡಿದಿದ್ದಾರೆ.
ಈಗಾಗಲೇ ಒಬ್ಬೊಬ್ಬರಾಗಿ ಕೊರೊನಾ ವಾರಿಯರ್ ಗಳು ಒಂದಿಲ್ಲೊಂದು ಕಾರಣಕ್ಕೆ ಸರ್ಕಾರದ ವಿರುದ್ದ ಸೆಟೆದು ನಿಲ್ಲುತ್ತಿದ್ದಾರೆ. ಇದೀಗ ಆಯುಷ್ ವೈದ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ಶತಪಟ್ಟು ಹಿಡಿದಿದ್ದಾರೆ. ಇಲ್ಲಿಯವರೆಗೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ದ ಇಂದು ಅಯುಷ್ ವೈದ್ಯರು ಕಿಡಿಕಾರಿದ್ದಾರೆ. ಅಲ್ಲದೇ ಚಿತ್ರದುರ್ಗದಲ್ಲಿ ಇಂದು 2000 ಆಯುಷ್ ಇಲಾಖೆ ವೈದ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಲಿದ್ದು, ಆಯುಷ್ ನ ಖಾಸಗೀ 20,000 ವೈದ್ಯರು ಸಹ ಕೆಲಸ ಸ್ಥಗಿತಗೊಳಿಸಲಿದ್ದಾರೆ ಎಂದು ಆಯುಷ್ ಫೆಡರೇಷನ್ ಆಫ್ ಕರ್ನಾಟಕದ ಖಜಾಂಚಿ ಡಾ. ಅನಂದ್ ಕಿರಿಶಾಳ್ ಹೇಳಿದ್ದಾರೆ.
ಅರುಣ್ ನವಲಿ ಪವರ್ ಟಿವಿ ಬಳ್ಳಾರಿ