ಚಿಕ್ಕಮಗಳೂರು : ಆ ಅಜ್ಜಿಗೆ 72 ವರ್ಷ ವಯಸ್ಸಾಗಿತ್ತು. ಮನೆಯಲ್ಲೇ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೂ ಉಸಿರು ಚೆಲ್ಲಿಬಿಡ್ತು ಬಡ ಜೀವ. ಮೂರು ದಿನದ ನಡೆದ ಈ ಸಾವು, ಜಿಲ್ಲಾಡಳಿತಕ್ಕೆ ಇದೀಗ ತಲೆನೋವಾಗಿ ಪರಿಣಮಿಸಿದೆ. ನಿನ್ನೆ ಬಂದ ವರದಿಯಲ್ಲಿ ಅಜ್ಜಿಗೆ ಕೊರೊನಾ ಇದ್ದಿದ್ದು ಧೃಡವಾಗಿದೆ. ಅಜ್ಜಿಯ ಅಂತ್ಯಸಂಸ್ಕಾರ ನಡೆಸಿದ ಬಳಿಕ ಬಂದ ವರದಿ ಇದೀಗ ಕುಟುಂಬಸ್ಥರಿಗೂ ಶಾಕ್ ತರಿಸಿದೆ. ಕೊನೆಕ್ಷಣದಲ್ಲಿ ಅಜ್ಜಿಯ ಆರೈಕೆ ಮಾಡಿದವರು ಸೇರಿದಂತೆ ಸಂಬಂಧಿಕರಿಗೂ ಅಜ್ಜಿಯಿಂದ ಆತಂಕ ಎದುರಾಗಿದೆ.
ಕಾಫಿನಾಡಿನಲ್ಲಿ ಕೊರೊನಾದಿಂದ ಪ್ರತಿನಿತ್ಯ ಒಂದು-ಎರಡು ಸಾವುಗಳು ಸಂಭವಿಸ್ತಿದೆ. ನಿನ್ನೆ ಕೊರೊನಾಕ್ಕೆ 2 ಮಂದಿ ಸಾವನ್ನಪ್ಪಿದ್ರೆ, ಇಂದು ಹೆಮ್ಮಾರಿಗೆ ಮತ್ತೊಂದು ಬಲಿಯಾಗಿದೆ. ನಿನ್ನೆ ಜಿಲ್ಲಾಡಳಿತ ಧೃಡಿಕರಿಸಿದ ಎರಡು ಸಾವುಗಳಲ್ಲಿ ಒಂದು ಪ್ರಕರಣ ಎರಡು ದಿನಗಳ ಹಿಂದಿನ ಅಜ್ಜಿಯ ಪ್ರಕರಣ. ಅಂತ್ಯಸಂಸ್ಕಾರ ಮಾಡಿದ್ಮೇಲೆ 72 ವರ್ಷದ ಅಜ್ಜಿಗೆ ಕೊರೊನಾ ಇದ್ದಿದ್ದು ಇದೀಗ ದೃಢವಾಗಿದೆ. ಕೊರೊನಾ ದೃಢವಾಗಿರೋ ವಿಚಾರ ಸದ್ಯ ಅಜ್ಜಿಯ ಕುಟುಂಬಸ್ಥರಿಗೆ ಆತಂಕವನ್ನ ಮೂಡಿಸಿರೋದು. ನಗರದ ಹೊರವಲಯದ ರಾಮನಹಳ್ಳಿಯ ಏರಿಯಾವನ್ನ ಈಗಾಗಲೇ ಸೀಲ್ ಡೌನ್ ಮಾಡಲಾಗಿದ್ದು, ಆ ಏರಿಯಾದ ಜನರು ಇದೀಗ ಹೊರಗಡೆ ಓಡಾಡದಂತೆ ಸೂಚಿಸಲಾಗಿದೆ. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಜ್ಜಿಯನ್ನ ಕುಟುಂಬಸ್ಥರು ಆರೈಕೆ ಮಾಡಿದ್ರು. ಹಲವರು ಸಂಬಂಧಿಕರು ಬಂದು ಅಜ್ಜಿಯ ಆರೋಗ್ಯವನ್ನ ವಿಚಾರಿಸಿಕೊಂಡು ಹೋಗಿದ್ರು. ಆದ್ರೆ ಕುಟುಂಬಸ್ಥರ ಅಜ್ಜಿಯನ್ನ ಬದುಕಿಸೋ ಪ್ರಯತ್ನ ಮಾಡಿದ್ರೂ ಸಾಧ್ಯವಾಗದೇ ಅಜ್ಜಿ ಮನೆಯಲ್ಲೇ ಸಾವನ್ನಪ್ಪಿದ್ರು. ಕೊನೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮೃತ ಅಜ್ಜಿಯ ಸ್ವಾಬ್ ತೆಗೆದು ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಿದ್ರು. ನಿನ್ನೆ ಬಂದಿರೋ ವರದಿ ಅಜ್ಜಿಯ ಸಂಬಂಧಿಕರು ಸೇರಿದಂತೆ ನೆರೆಹೊರೆಯವರಿಗೂ ಆತಂಕ ತಂದೊಡ್ಡಿದೆ..
ಅಜ್ಜಿಯ ವರದಿಯನ್ನ ಎದುರು ನೋಡ್ತಿದ್ದ ಆರೋಗ್ಯ ಇಲಾಖೆ ಮೃತ ಅಜ್ಜಿಗೆ ಕೊರೊನಾ ಇರೋದು ದೃಢವಾದ ಮೇಲೆ ಅಜ್ಜಿಯ ಸಂಪರ್ಕದಲ್ಲಿದ್ದ ಕುಟುಂಬಸ್ಥರು, ಸಂಬಂಧಿಕರ ಪರೀಕ್ಷೆಯನ್ನ ಮಾಡಿಸಿದೆ. ಅಜ್ಜಿಯ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರ ಸ್ವಾಬ್ ಕೂಡ ತೆಗೆಯಲಾಗಿದ್ದು, ಸದ್ಯ ವರದಿಗಾಗಿ ಜಿಲ್ಲಾಡಳಿತ ಸೇರಿದಂತೆ ಕುಟುಂಬಸ್ಥರು ಕೂಡ ಆತಂಕದಿಂದಲೇ ಎದುರು ನೋಡ್ತಿದ್ದಾರೆ.
ಹೀಗೆ ಒಂದ್ಕಡೆ ಕಾಫಿನಾಡಿನಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಲೇ ಇದೆ. ಸದ್ಯ 155 ಸೋಂಕಿತರು ಜಿಲ್ಲೆಯಲ್ಲಿದ್ದು, ಅದರಲ್ಲಿ 56 ಕೇಸ್ಗಳು ಸಕ್ರಿಯವಾಗಿದ್ರೆ, ಅದರಲ್ಲಿ ಕ್ರೂರಿ ಕೊರೊನಾಗೆ ಆರು ಮಂದಿ ಬಲಿಯಾಗಿದ್ದಾರೆ. ಈ ನಡುವೆ ಕೊರೊನಾದಿಂದ ಮೃತಪಡುವವರ ಸಂಖ್ಕೆಯೂ ಕೂಡ ಜನರಲ್ಲಿ ಭಯ ಹುಟ್ಟಿಸಿದೆ. ಅದರಲ್ಲೂ ಮೃತಪಟ್ಟ ಅಜ್ಜಿಯ ಪ್ರಕರಣ ಅಂತ್ಯಸಂಸ್ಕಾರವಾದ 2 ದಿನದ ಬಳಿಕ ಜಿಲ್ಲಾಡಳಿತದ ಕೈ ಸೇರಿದ್ದು, ಅಜ್ಜಿಯಿಂದ ಮತ್ತೆಷ್ಟು ಜನರಿಗೆ ಕೊರೊನಾ ಬರಬಹುದು ಅನ್ನೋ ಅತಂಕ ಸ್ಥಳೀಯರಲ್ಲಿ ಮನೆಮಾಡಿದೆ…
ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು…