Thursday, January 16, 2025

ಪಿ.ಯು ರಿಸಲ್ಟ್​​ ವಿಜ್ಞಾನ ವಿಭಾಗದಲ್ಲಿ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ

ಉಡುಪಿ : ದ್ವಿತೀಯ ಪಿಯುಸಿ ಫಲಿತಾಂಶ ಹೊರ ಬಿದ್ದಿದ್ದು, ಉಡುಪಿಯ ಅಭಿಜ್ಞಾ ರಾವ್ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಅಭಿಜ್ಞಾ 596 ( ಶೇಕಡಾ 99.33) ಅಂಕ ಪಡೆದ ಜಿಲ್ಲೆಯ ಕೀರ್ತಿ ಮೆರೆದಿದ್ದಾರೆ. ಆಶಾ ರಾವ್ ಮತ್ತು ದಿವಂಗತ ವಿಠಲ್ ರಾವ್ ದಂಪತಿಗಳ ಪುತ್ರಿಯಾಗಿರುವ ಈಕೆ ಗಣಿತ, ರಸಾಯನ ಶಾಸ್ತ್ರ, ಸಂಸ್ಕೃತ, ಕಂಪ್ಯೂಟರ್ ಸೈಯನ್ಸ್ ನಲ್ಲಿ 100 ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾಳೆ. ಈ ಹಿಂದೆ ಎಸ್ ಎಸ್ ಎಸ್ ಸಿ ಪರೀಕ್ಷೆಯಲ್ಲೂ 99.8 % ಗಳಿಸಿ ರಾಜ್ಯಕ್ಕೆ ದ್ವೀತಿಯ ಸ್ಥಾನಿಯಾಗಿ ಮೂಡಿ ಬಂದಿದ್ದರು. ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು ತುಂಬಾ ಖುಷಿಯಾಗಿದೆ, ನನ್ನ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರು ತುಂಬಾ ಸಹಕಾರ ನೀಡಿದ್ದಾರೆ. ಮುಂದೆ ಇಂಜಿನಿಯರಿಂಗ್ ಮಾಡಬೇಕು ಎನ್ನುವ ಇಂಗಿತವನ್ನ ಈ ಸಂದರ್ಭ ಮಾಧ್ಯಮ‌ ಮುಂದೆ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES