Thursday, January 16, 2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವಾರ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್

ಮಂಗಳೂರು : ಒಂದು ವಾರ ಕಾಲ ಲಾಕ್ ಡೌನ್ ಘೋಷಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾರ್ಗಸೂಚಿಯನ್ನ ಹೊರಡಿಸಿದ್ದು, ಅದರ ಪ್ರಕಾರ ಜುಲೈ 15 ರ ಬುಧವಾರ ರಾತ್ರಿ 8 ಗಂಟೆಯಿಂದಲೇ ಕಟ್ಟುನಿಟ್ಟಿನ‌ ಲಾಕ್ ಡೌನ್ ಜಾರಿ ಮಾಡಲಾಗುತ್ತಿದ್ದು, ಜುಲೈ 23 ರ ಬೆಳಿಗ್ಗೆ 5 ಗಂಟೆವರೆಗೆ ಲಾಕ್ ಡೌನ್ ಇರಲಿದೆ.

ಲಾಕ್ ಡೌನ್ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನಿರಲಿದೆ?
ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 11 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
ಹಾಲು, ಹಣ್ಣು-ತರಕಾರಿ, ದಿನಸಿ, ಪಡಿತರ ವಸ್ತುಗಳು ಲಭ್ಯ
ತುರ್ತು ಆರೋಗ್ಯ ಸೇವೆಗಳು ಲಭ್ಯ
ಹೋಟೆಲ್ ಗಳಲ್ಲಿ ಆನ್ ಲೈನ್ ಪಾರ್ಸಲ್ ವ್ಯವಸ್ಥೆ ಲಭ್ಯ
ಅಗತ್ಯ ಸರ್ಕಾರಿ ಕಚೇರಿ ಗಳು ಓಪನ್
ಕೃಷಿ ಸಂಬಂಧಿತ ಕಚೇರಿಗಳು ಓಪನ್

ಲಾಕ್ ಡೌನ್ ವೇಳೆ ಏನಿರಲ್ಲ?
ಬಾರ್,ವೈನ್ ಶಾಪ್
ಹೊಟೇಲ್ ಸೇವೆ
ಖಾಸಗಿ ವಾಹನ ಸಂಚಾರ
ಬ್ಯಾಂಕ್ ಸೇವೆ
ಸಾರ್ವಜನಿಕ ಸಾರಿಗೆಗಳಾದ ಆಟೋ, ಕ್ಯಾಬ್
ಮಾಲ್,ಉದ್ಯಾನವನ
ದೇವಸ್ಥಾನ,ಮಸೀದಿ, ಚರ್ಚ್
ಸಣ್ಣ ಕೈಗಾರಿಕೆ

ಇನ್ನು ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಎಚ್ಚರಿಸಿದ್ದಾರೆ.

RELATED ARTICLES

Related Articles

TRENDING ARTICLES