ಉಡುಪಿ : ಕೊರೋನಾ ಕಾಟ ಪ್ರಾರಂಭವಾದಗಿನಿಂದ ಮಾಧ್ಯಮಗಳಲ್ಲಿ ಮಾನವೀಯತೆ ಮರೆಯಾದ ಸುದ್ದಿಗಳೆ ರಾರಾಜಿಸುತ್ತಿವೆ. ಜೇಸಿಬಿಯಲ್ಲಿ ಕೊರೋನಾ ದಿಂದ ಮೃತಪಟ್ಟವರ ಶವ ಸಂಸ್ಕಾರ, ಮೃತಪಟ್ಟ ಸೊಂಕಿತರನ್ನು ಪ್ರಾಣಿಗಳಂತೆ ಒಂದೇ ಗುಂಡಿಯಲ್ಲಿ ಮಣ್ಣು ಮಾಡಿದ್ದು, ಮೃತಪಟ್ಟ ಸೊಂಕಿತನ ಶವವನ್ನು ಮಳೆಯಲ್ಲಿ ಬಿಟ್ಟು ತೆರಳಿದ್ದು ಹೀಗೇ ಪಟ್ಟಿ ಮಾಡಿದ್ರೆ ಸಾಕಷ್ಟಿವೆ. ಆದರೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಇಂತಹ ಪ್ರಕರಣಗಳ ಬದಲಿಗೆ ಮಾನವೀಯತೆ ಮೆರೆಯುವ ಕಾರ್ಯ ಕಂಡು ಬರುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ದಾವಣಗೆರೆ ಮೂಲದ ವ್ಯಕ್ತಿಯೋರ್ವರು ತೀವ್ರವಾಗಿ ಅಸ್ವಸ್ಥರಾಗಿ ನಗರದ ಡಾ.ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆ ದಾಖಲಾಗಿ ಅಸುನೀಗುತ್ತಾರೆ. ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಪ್ರೋಟೊಕಾಲ್ ನಂತೆ ಜಿಲ್ಲೆಯಲ್ಲಿಯೇ ಶವ ಸಂಸ್ಕಾರ ಮಾಡಬೇಕಾದ ಅಗತ್ಯತೆ ಕಂಡು ಬರುತ್ತದೆ. ಆ ಸಂದರ್ಭದಲ್ಲಿ ಮೃತ ವ್ಯಕ್ತಿಯ ಗೌರವಕ್ಕೆ ಯಾವುದೆ ಧಕ್ಕೆ ಯಾಗದಂತೆ ಮತ್ತು ಆರೋಗ್ಯ ಇಲಾಖೆ ನಿರ್ದೇಶನಗಳಿಗೆ ಭಾದೆಯಾಗದ ಹಾಗೆ ಶಬವನ್ನು ಧಫನ್ ಮಾಡಲಾಗುತ್ತೆ. ನಗರದ ಖಬರ್ಸ್ತಾನ್ ದಲ್ಲಿ ಸ್ವಯಂ ಸೇವಕರಾದ ಮುನೀರ್ ಕಲ್ಮಾಡಿ ನೇತೃತ್ವದಲ್ಲಿ ಇರ್ಫಾಜ್, ಶಾಹಿದ್ , ಸಫಾಜ್, ಜುರೈ, ಫೈಝಲ್, ಹನ್ನನ್, ಅಶೀಲ್,. ಅಶ್ರಫ್ ಆದಿ ಉಡುಪಿ, ಗಫೂರ್ ಆದಿ ಉಡುಪಿ ಪಿಪಿಇ ಕಿಟ್ ಧರಿಸಿ ಶವ ಸಂಸ್ಕಾರ ನಡೆಸಿ ಅಂತಿಮ ಗೌರವ ಅರ್ಪಿಸಿದ್ದಾರೆ. ಕೊರೋನಾ ಅಂದಾಗಲೇ ಮಾರು ದೂರ ಓಡುವ ಈ ಕಾಲದಲ್ಲಿ ಬೇರೆಯಿಂದ ಬಂದು ಮೃತಪಟ್ಟವರ ಶವ ಸಂಸ್ಕಾರವನ್ನು ಗೌರವ ಪೂರ್ಣವಾಗಿ ನೇರವೇರಿಸಿದ ಈ ಯುವಕರ ತಂಡಕ್ಕೆ ಸದ್ಯ ಜಿಲ್ಲೆಯ ಸಹೃದಯಿಗಳು ಶಹಬ್ಬಾಸ್ ಅಂದಿದ್ದಾರೆ.
-ಅಶ್ವತ್ಥ್ ಆಚಾರ್ಯ
ಉಡುಪಿ