ರಾಮನಗರ : ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಇಂದು ಸಂಸದ ಡಿ.ಕೆ ಸುರೇಶ್ ಭೇಟಿ ನೀಡಿದ್ರು. ಕೋವಿಡ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಸ್ವಚ್ಚತೆ ಇಲ್ಲದ ಬಗ್ಗೆ ಸಾಕಷ್ಟು ದೂರುಗಳ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಅವ್ಯವಸ್ಥೆ ಸಂಭಂದ ಪೋಟೊ ವೈರಲ್ ಆಗಿದ್ದವು. ಈ ಸಂಭಂದ ಇಂದು ಸ್ವತಃ ಸಂಸದ ಡಿ.ಕೆ ಸುರೇಶ್ ಪಿಪಿಇ ಕಿಟ್ ಧರಿಸಿಕೊಂಡು ಆಸ್ಪತ್ರೆಗೆ ಭೇಟಿ ನೀಡಿದ್ರು, ಕರೋನ ಸೋಂಕಿತರ ಬಳಿ ಹೋಗಿ ಅವರ ಸಮಸ್ಯೆ ಆಲಿಸಿದರು. ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಸ್ವಚ್ಚತೆ ಇಲ್ಲದಿರುವುದು ಊಟದ ಬಗ್ಗೆ ಸೋಂಕಿತರ ಬಳಿ ಮಾಹಿತಿ ಪಡೆದುಕೊಂಡ ಸಂಸದ ಡಿಕೆಸು. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ರು, ನಂತರ ಮಾತನಾಡಿದ ಸಂಸದ ಡಿ.ಕೆ ಸುರೇಶ್ ಕೋವಿಡ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕರೋನ ಮಹಾಮಾರಿ ಯಾವ ರೂಪದಲ್ಲಿ ಹರಡುತ್ತಿದೆ. ಎಂಬುದು ಗೊತ್ತಾಗ್ತಿಲ್ಲ, ಮೊದಲು ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ರು.