ಗದಗ: ೨ ವರ್ಷದ ಮಗುವಿಗೆ ಕ್ವಾರಂಟೈನ್ ಉಲ್ಲಂಘನೆಯ ನೋಟಿಸ್ ನೀಡುವ ಮೂಲಕ ಅಧಿಕಾರಿಗಳು ಮಹಾ ಎಡವಟ್ಟು ಮಾಡಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹುಡ್ಕೋ ಕಾಲೋನಿ ಆದ್ಯಾಶ್ರಿ ಕುಂಬಾರ ಎಂಬ ೨ ವರ್ಷದ ಮಗುವಿಗೆ ಮುಂಡರಗಿ ತಹಶಿಲ್ದಾರ ನೋಟಿಸ್ ಜಾರಿಗೊಳಿಸಿದ್ದಾರೆ. ಕಾರಣ ಕ್ವಾರಂಟೈನ್ ಅವಧಿನಲ್ಲಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಲಾಗಿದೆ. ಇದು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ನೇರೆ ಉಲ್ಲಂಘನೆ ಆಗಿದೆ. ಈ ಕಾಯ್ದೆಯ ಕಲಂ ೫೧ ರ ಅಡಿ ಹಾಗೂ ಐಪಿಸಿ ಸೆಕ್ಷನ್ ಕಲಂ ೧೮೮ ರ ಅಡಿ ಕಾರಾವಾಸ ಶಿಕ್ಷೆಗೆ ಒಳಪಡುವ ಶಿಕ್ಷಾರ್ಹ ಅಪರಾಧವಾಗಿದೆ. ಈ ನೋಟಿಸ್ ಎಚ್ಚರಿಕೆ ಎಂದು ಭಾವಿಸಿ, ಅವಧಿ ಮುಗಿಯುವ ವರೆಗೆ ಫೋನ್ ಸ್ವಿಚ್ ಆಫ್ ಮಾಡಬಾರದು. ಅವಧಿ ಮಗಿಯುವ ಮುನ್ನವೆ ಫೋನ್ ಸ್ವಿಚ್ ಆಫ್ ಮಾಡಿದ್ರೆ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದಂತೆ ಹೋಗಿ ಹೋಗಿ ಏನು ಅರಿಯದ ಕಂದಮ್ಮನ ಮೇಲೆ ಮುಂಡರಗಿ ತಹಶಿಲ್ದಾರ್ ನೋಟಿಸ್ ಜಾರಿ ಮಾಡಿರುವುದು ನಿಜಕ್ಕೂ ನಾಚಿಕೆಗೇಡು ಸಂಗತಿ.
ಮಹಾಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ