ಉಡುಪಿ : ಬೆಂಗಳೂರು ಲಾಕ್ ಡೌನ್ ಆಗಲಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಟೆನ್ಶನ್ ಮನೆ ಮಾಡಿಲಿದೆ. ಈಗಾಗಲೆ ಹೊರ ರಾಜ್ಯದಿಂದ ಜಿಲ್ಲೆಗೆ ಬಂದವರಲ್ಲಿಯೇ ಅಧಿಕವಾಗಿ ಕೊರೋನಾ ಕಾಣಿಸಿಕೊಂಡಿತ್ತು. ಇನ್ನು ಬೆಂಗಳೂರು ನಲ್ಲಿ ಕೊರೋನಾ ಪ್ರಕರಣ ಮಿತಿ ಮೀರಿ ಹರಡಿರುವ ಕಾರಣಕ್ಕೆ ಮಂಗಳವಾರದಿಂದ ಲಾಕ್ ಡೌನ್ ಹೇರಲಾಗಿದೆ, ಹಾಗಾಗಿ ಜಿಲ್ಲೆಗೆ ಬೆಂಗಳೂರುನಿಂದ ಬರುವವರಿಂದ ಕೊರೋನಾ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಸರಕಾರ ಲಾಕ್ ಡೌನ್ ಆದೇಶ ಹೊರಡಿಸಿದ ಬೆನ್ನಿಗೆ ಬೆಂಗಳೂರು ನಿಂದ ಸಾಕಷ್ಟು ಮಂದಿ ಊರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಹೊರರಾಜ್ಯ, ದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯವಾಗಿ ಮಾಡಬೇಕಾಗಿದೆ, ಆದರೆ ಅಂತರ ಜಿಲ್ಲೆ ಪ್ರಯಾಣಕ್ಕೆ ಯಾವುದೇ ಕ್ವಾರಂಟೈನ್ ನಿಯಮ ಇಲ್ಲದಿರುವುದು ಸದ್ಯ ಜಿಲ್ಲೆಗೆ ತಲೆನೋವಾಗಿದೆ. ಹೀಗಾಗಿ ಬೆಂಗಳೂರು ನಿಂದ ಬಂದವರು ಮತ್ತು ಬರುವವರು ತಾವಾಗಿಯೇ ಸೆಲ್ಫ್ ಕ್ವಾರಂಟೈನ್ ಗೆ ಒಳಪಡಬೇಕು ಎನ್ನುವ ವಿನಂತಿಯನ್ನು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾಡಿದ್ದಾರೆ.