ಚಿಕ್ಕಮಗಳೂರು : ಸಾಮಾಜಿಕ ಅಂತರ ಮರೆತು ಚಿಕನ್ ಖರೀದಿಗೆ ಮುಗಿ ಬಿದ್ದ ಘಟನೆ ಕಾಫಿನಾಡು ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ. ಸಂಡೇ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸರಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ದೈಹಿಕ ಅಂತರ ಮರೆತು ಜನ ಚಿಕನ್ ಗಾಗಿ ಮುಗಿಬೀಳುತ್ತಿದ್ದಾರೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಸ್ವಲ್ಪವೂ ಎಚ್ಚೆತ್ತುಕೊಳ್ಳದೆ ಚಿಕನ್ ಖರೀದಿಗಾಗಿ ಮುಗಿಬಿದ್ದಿರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ. ಚಿಕನ್ ಅಂಗಡಿ ಮಾಲೀಕರು ಎಷ್ಟೇ ಮನವಿ ಮಾಡಿಕೊಂಡರು ನಾಮುಂದು ತಾಮುಂದು ಎಂದು ಚಿಕನ್ ಖರೀದಿಸುತ್ತಿರುವುದು ನಗರದ ಮಾರ್ಕೆಟ್ ರಸ್ತೆಯಲ್ಲಿ ಕಂಡುಬಂತು…
ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು