ಬಳ್ಳಾರಿ : ಬಳ್ಳಾರಿಯಲ್ಲಿ ಸಂಡೇ ಲಾಕ್ ಡೌನ್ ಗೆ ಬೆಳ್ಳಂಬೆಳಗ್ಗೆ ಜನರಿಂದ ಗುಡ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಬಳ್ಳಾರಿಯ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ದುರ್ಗಾ ಪಡೆ ಫೀಲ್ಡಿಗಿಳಿದಿದೆ. ಬಳ್ಳಾರಿಯಲ್ಲಿ ಮಹಿಳಾ ಸಂರಕ್ಷಣೆಗಂತಲೇ ವಿಶೇಷವಾಗಿ ರಚಿಸಲಾಗಿರುವ ತಂಡವೇ ದುರ್ಗಾಪಡೆ..!
ದುರ್ಗಾಪಡೆಯ ಮಹಿಳಾ ಪೊಲೀಸ್ ಸಿಬ್ಬಂದಿ ಇಂದು ಬಳ್ಳಾರಿ ನಗರವನ್ನು ಸೈಕಲ್ ನಲ್ಲಿ ಸುತ್ತಿದರು. ಸೈಕಲ್ ಜಾಥಾ ಮಾಡುವುದುರ ಮೂಲಕ ಜನಜಾಗೃತಿ ಮೂಡಿಸುವದಕ್ಕೆ ಪ್ರಯತ್ನಿಸಿದರು. ರಾಯಲ್ ಸರ್ಕಲ್, ಬೆಂಗಳೂರು ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿ ಅಲ್ಲಿನ ಜನರಿಗೆ ಲಾಕಗ ಡೌನ್ ಇರೋದ್ರಿಂದ ತುರ್ತು ಸಂಧರ್ಬ ಬಿಟ್ಟು ಹೊರಗಡೆ ಬರದಂತೆ ತಿಳುವಳಿಕೆ ಮೂಡಿಸಿದರು.
ಕಳೆದ ವಾರದ ಲಾಕ್ ಡೌನ್ ಸಂದರ್ಬದಲ್ಲಿ ಜಿಲ್ಲೆಯ ಎಸ್ ಪು ಸಿ.ಕೆ ಬಾಬಾರವರು ಸೈಕಲ್ ಸವಾರಿ ಮಾಡಿ ಚೆಕ್ ಪೋಸ್ಟ್ ಮತ್ತು ಇತರೆಡೆ ಪರಿಶೀಲನೆ ನಡೆಸಿದ್ದರು..
ಅರುಣ್ ನವಲಿ ಪವರ್ ಟಿವಿ ಬಳ್ಳಾರಿ