ಉಡುಪಿ :ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕುಂದಾಪುರ ವರ್ತಕರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಹೇರಿಕೊಂಡಿದ್ದಾರೆ. ಜುಲೈ 13 ರಿಂದ 31 ವರೆಗೆ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2 ರ ವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲಿದೆ. ಈ ನಿಟ್ಟಿನಲ್ಲಿ ವರ್ತಕರು ಮತ್ತು ಸಾರ್ವಜನಿಕ ಹಿತರಕ್ಷಣಾ ಸಮಿತಿ ಸಭೆ ಕರೆದು ನಿರ್ಣಯ ಕೈಗೊಂಡಿದ್ದಾರೆ. ಈ ಬಗ್ಗೆ ಎಲ್ಲಾ ವರ್ತಕರು ಒಮ್ಮತದ ನಿರ್ಧಾರ ವ್ಯಕ್ತಪಡಿಸಿದ್ದಾರೆ. ಸದ್ಯ ಸೋಮವಾರದಿಂದ ಕುಂದಾಪುರದಲ್ಲಿ ಹೊಸ ಲಾಕ್ ಡೌನ್ ನಿಯಮ ಜಾರಿಗೆ ಬರಲಿದ್ದು, ತುರ್ತು ಅಗತ್ಯತೆಯ ಮೆಡಿಕಲ್, ಅಧಿಕೃತ ಮಾರಾಟ ಅಂಗಡಿ, ಹೊಟೇಲ್ ಗಳು ಎಂದಿನಂತೆ ತೆರೆಯಲಿದೆ.