ಚಿಕ್ಕಮಗಳೂರು : ಬೈಕ್ ಚಾಲಕ ಬೈಕ್ ಬಿಟ್ಟು ಕಾರನ್ನ ಕಂಟ್ರೋಲ್ ಗೆ ತೆಗೆದುಕೊಂಡ ಪರಿಣಾಮ ಸಂಭವಿಸಬಹುದಾದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಮಾರುತಿ-800 ಕಾರಿನಲ್ಲಿ ಬಂದ ವ್ಯಕ್ತಿ, ರಸ್ತೆ ಪಕ್ಕ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದಾನೆ. ಅದೇ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಯುವತಿ ಕೂಡ ಏಕೋ-ಏನೋ ತಟ್ಟನೆ ಡೋರ್ ತೆಗೆದು ಕಾರಿನಿಂದ ಕೆಳಗಿಳಿದಿದ್ದಾಳೆ. ಆಕೆ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ನಿಂತಿದ್ದ ಕಾರು ಚಾಲಕನಿಲ್ಲದೇ ತಾನಾಗೇ ಚಲಿಸಲು ಆರಂಭಿಸಿತು. ಅಕ್ಕಪಕ್ಕದಲ್ಲಿದ್ದ ಎಲ್ಲರಿಗೂ ಆಶ್ಚರ್ಯ. ಅದೇ ವೇಳೆಗೆ ಸ್ಕೂಟಿಯಲ್ಲಿ ಬಂದು ಕಾರಿನ ಹಿಂಭಾಗದಲ್ಲಿ ಪಾರ್ಕ್ ಮಾಡಿದ್ದ ಸ್ಕೂಟಿ ಸವಾರ ಓಡಿಬಂದು ಕಾರ್ ಡೋರ್ ತೆಗೆದು ಡ್ರೈವರ್ ಸೀಟಲ್ಲಿ ಕೂತು ಕಾರಿನ ಬ್ರೇಕ್ ಹಿಡಿದು ಕಂಟ್ರೋಲ್ ಗೆ ತೆಗೆದುಕೊಂಡು ಬಿಟ್ಟ ಆಪತ್ಬಾಂಧವ. ಅದೇ ರಸ್ತೆಯಲ್ಲಿ ಸಣ್ಣ ಮಕ್ಕಳು ಸೇರಿದಂತೆ ಜನಜಂಗುಳಿ ಹಾಗೂ ಜನರ ಓಡಾಟ ಹೆಚ್ಚಿತ್ತು. ಆದ್ರೆ, ಥೇಟ್, ಸಿನಿಮಾ ಹೀರೋನಂತೆ ಬಂದ ವ್ಯಕ್ತಿ ಸಂಭವಿಸಬಹುದಾದ ಅನಾಹುತವನ್ನ ಕ್ಷಣಾರ್ಧದಲ್ಲಿ ತಡೆದು ಸಾಹಸ ಮೆರೆದಿದ್ದಾರೆ. ಕಾರು ಚಾಲಕನ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದ್ದು, ಬೈಕ್ ಸವಾರ ಕಾರನ್ನ ಕಂಟ್ರೋಲ್ ಗೆ ತೆಗೆದುಕೊಂಡು ಸಮಯ ಪ್ರಜ್ಞೆ ಮೆರೆದಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ…
ಸಚಿನ್ ಶೆಟ್ಟಿ ಪವರ್ ಟಿವಿ ಚಿಕ್ಕಮಗಳೂರು..