Wednesday, January 15, 2025

ಕೊರೋನಾ ವಾರಿಯರ್ಸ್​ ಅವಮಾನಿಸಿದ್ರೆ ಸಹಿಸೊಲ್ಲ: ಡಿಸಿ

ಉಡುಪಿ : ಉಡುಪಿ ಜಿಲ್ಲಾಧಿಕಾರಿ ಮತ್ತೋಮ್ಮೆ ಸಾರ್ವಜನಿಕ ಸಭೆಯಲ್ಲಿ ಗುಡುಗಿದ್ದಾರೆ. ಈ ಬಾರಿ ಕೊರೋನಾ ವಾರಿಯರ್ಸ್​ ಅವರುಗಳನ್ನು ಅವಮಾನಿಸುವವರ ಕುರಿತು ಗರಂ ಆಗಿರೋದು. ಹೆಬ್ರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಉಡುಪಿ ಡಿಸಿ ಜಿ.ಜಗದೀಶ್ ಸಭೆಯಲ್ಲಿ ಮಾತನಾಡುತ್ತಾ, ಆಶಾ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಅವಮಾನ ಸಹಿಸೋಲ್ಲಾ, ಅಂತವರಿಗೆ ತಕ್ಕ ಶಾಸ್ತಿ ಮಾಡಲಾಗುವುದು. ಆಶಾ ಕಾರ್ಯಕರ್ತೆಯಿಂದ ಆರೋಗ್ಯ ಇಲಾಖೆಯ ಡಿಎಚ್‌ಓ ವರೆಗೆ ಎಲ್ಲರೂ ಹಗಲು ರಾತ್ರಿ ಎನ್ನದೆ ಕೊರೋನಾ ಹೋರಾಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅವಮಾನಿಸುವ ಕೆಲಸ ಕಂಡಲ್ಲಿ ಸುಮ್ಮನೆ ಕೂರೋಲ್ಲ, ಅಂತಹ ಕ್ರಿಮಿಗಳಿಗೆ ಪಾಠ ಕಲಿಸಲು ನಾವು ಸಿದ್ಧರಿದ್ದೇವೆ ಎನ್ನುವ ಖಡಕ್ ಸಂದೇಶವನ್ನು ಉಡುಪಿ ಡಿಸಿ ಜಿ.ಜಗದೀಶ್ ನೀಡಿದ್ದಾರೆ.

RELATED ARTICLES

Related Articles

TRENDING ARTICLES