ಹಾವೇರಿ : ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಳೆದೊಂದು ವಾರದಿಂದ ಸೀಲ್ ಡೌನ್ ಮಾಡಿದ್ದಕ್ಕೆ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ. ಇಟಗಿ ಹಾಗೂ ಕುಪ್ಪೇಲೂರು ಗ್ರಾಮದ ಆಸ್ಪತ್ರೆ ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕಿತೆಯೊಬ್ಬಳು ಆಸ್ಪತ್ರೆಗೆ ಬಂದು ಹೋಗಿದ್ದಾರೆ ಎಂದು ಇಲ್ಲಿನ ಸಿಬ್ಬಂದಿಗಳನ್ನು ಕ್ವಾರೆಂಟೈನ್ ಮಾಡಲಾಗಿದೆ. ಇದರಿಂದ ಆಸ್ಪತ್ರೆಯನ್ನೂ ಸೀಲ್ ಡೌನ್ ಮಾಡಿರೋದು ಬಡ ಜನರಿಗೆ ಸಮಸ್ಯೆಯಾಗಿದೆ. ಖಾಸಗಿ ಆಸ್ಪತ್ರೆಗೆ ಹೋದರೆ ಹಣ ಪೀಕುತ್ತಾರೆ, ಇಲ್ಲಿ ಸುತ್ತಮುತ್ತಲಿನ ಹಳ್ಳಿಯ ಬಡ ಜನರು ಅನಾರೋಗ್ಯಕ್ಕೆ ತುತ್ತಾದರೆ ಎಲ್ಲಿ ಹೋಗಬೇಕು. ಕೂಡಲೇ ಒಂದು ವಾರದಿಂದ ಸೀಲ್ ಡೌನ್ ಮಾಡಿರೋ ಈ ಆಸ್ಪತ್ರೆಗಳನ್ನು ತೆರೆಯಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.