Wednesday, January 8, 2025

ಬಾಗಲಕೋಟೆ ಜಿಲ್ಲೆಯಲ್ಲಿ ಮಹಾಮಾರಿಗೆ ವೃಧ್ದೆ ಬಲಿ – ಸೋಂಕಿನಿಂದ ಸಾವನಪ್ಪಿದವರ ಸಂಖ್ಯೆ 9 ಕ್ಕೆರಿಕೆ..

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಜೋರಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 349 ಕ್ಕೆರಿದೆ‌. ಸೋಂಕಿತರ ಸಂಖ್ಯೆ ಜೋತೆಗೆ ಜಿಲ್ಲೆಯಲ್ಲಿ ಕೋವಿಡ್ ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸದ್ಯ ಸಾವಿನ ಸಂಖ್ಯೆ 9 ಕ್ಕೆರಿದೆ. ಇಂದು ಬಾಗಲಕೋಟೆಯ ವಿದ್ಯಾಗಿರಿಯ 78 ವರ್ಷದ‌ ವೃದ್ದೆ ಪಿ-25338 ಸಾವನಪ್ಪಿದ್ದಾರೆ. ತೀರ್ವ ಉಸಿರಾಟದ ಲಕ್ಷಣದಿಂದಾಗಿ ಜುಲೈ 5 ರಂದು ಸೋಂಕು ದೃಡಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಇಂದು ಸಾವನಪ್ಪಿದ್ದಾರೆ. ಜಿಲ್ಲೆಯ ಜನತೆಯಲ್ಲಿ ಮಹಾಮಾರಿ ಆತಂಕ ಹುಟ್ಟುಸಿದೆ. ಹಳ್ಳಿ-ಹಳ್ಳಿಗೂ ತನ್ನ ಬಾಹುಗಳನ್ನ ವ್ಯಾಪಿಸುತ್ತಿದೆ ಎಂಬ ಭಯದಲ್ಲಿದ್ದಾರೆ ಬಾಗಲಕೋಟೆ ಜಿಲ್ಲೆಯ ಜನರ..

RELATED ARTICLES

Related Articles

TRENDING ARTICLES