ದೊಡ್ಡಬಳ್ಳಾಪುರ : ದೇಶದಲ್ಲಿ ಕೊರೊನಾ ವೈರಸ್ ರುದ್ರ ನರ್ತನ ಮಾಡುತ್ತಿದೆ. ಇತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ವೈರಸ್ ನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ. ವೈರಸ್ ನಿಯಂತ್ರಣಕ್ಕಾಗಿ ಪೊಲೀಸರು, ವೈದ್ಯರು ಕೊರೊನಾ ವಾರಿಯರ್ಸ್ ಗಳಾಗಿ ಹಗಲಿರುಳು ದುಡಿಯುತ್ತಿದ್ದಾರೆ, ಸಾಮಾಜಿಕ ಅಂತರ ಕಾಯ್ದುಕೊಂಡು, ಮನೆಯಲ್ಲಿ ಸೇಫಾಗಿ ಇರೋದು ಬಿಟ್ಟು ಜನರು ಬೇಕಾಬಿಟ್ಟಿ ಓಡಾಡುತ್ತಿದ್ದಾರೆ, ಆದರೆ ಈ ಏರಿಯಾದ ಜನರ ಬೇಕಾಬಿಟ್ಟಿ ಓಡಾಟಕ್ಕೆ ಬ್ರೇಕ್ ಹಾಕಲು ಹೊಸದೊಂದು ನಿಯಮ ಜಾರಿಗೆ ತಂದಿದ್ದಾರೆ, ಏರಿಯಾ ಒಳ ಬರಲು ಮತ್ತು ಏರಿಯಾದಿಂದ ಹೊರ ಹೋಗಲು 5 ರೂಪಾಯಿ ಸುಂಕ ಕೊಡ ಬೇಕಿದೆ.
ದೊಡ್ಡಬಳ್ಳಾಪುರ ನಗರದ ಕತ್ತಾಳಿ ಮಕಾನ್ ಏರಿಯಾದ ಜನರು ಕೊರೊನಾ ವೈರಸ್ ನಿಯಂತ್ರಣಕ್ಕೆ ಹೊಸ ನಿಯಮ ಜಾರಿಗೆ ತಂದಿದ್ದಾರೆ, ಏರಿಯಾಕ್ಕೆ ಹೊಸಬರು ಯಾರು ಬರದ ರೀತಿಯಲ್ಲಿ ಏರಿಯಾದ ಎಲ್ಲಾ ರಸ್ತೆಗಳನ್ನ ಬಂದ್ ಮಾಡಿದ್ದಾರೆ, ಇಡೀ ಏರಿಯಾಕ್ಕೆ ಒಂದೇ ಮಾರ್ಗದಲ್ಲಿ ಒಳ ಹೊಗಲು ಮತ್ತು ಹೊರ ಬರುವ ವ್ಯವಸ್ಥೆ ಮಾಡಲಾಗಿದೆ. ಏರಿಯಾದಿಂದ ಯಾರೇ ಹೊರ ಹೋದರು ಮತ್ತು ಒಳ ಬಂದರು ಪ್ರವೇಶ ದ್ವಾರದಲ್ಲಿ 5 ರೂಪಾಯಿ ಸುಂಕ ಪಾವತಿ ಮಾಡ ಬೇಕು, ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕುವ ಕಾರಣಕ್ಕೆ 5 ರೂಪಾಯಿ ಸುಂಕ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ, ವೃದ್ದರಿಗೆ ಮತ್ತು ಮಕ್ಕಳಿಗೆ ಸುಂಕ ರಿಯಾಯಿತಿ ನೀಡಲಾಗಿದೆ.
ಏರಿಯಾದ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಟ್ ಇಟ್ಟು ಬಂದ್ ಮಾಡಲಾಗಿದ್ದು ಏರಿಯಾಕ್ಕೆ ಬರುವ ಹೊಸಬರ ಮೇಲೆ ನೀಗ ಇಡಲಾಗಿದೆ, ಏರಿಯಾ ಒಳ ಬರುವ ಮುನ್ನ ಉಷ್ಣಾಂಶ ಪರೀಕ್ಷಿಸಲಾಗುತ್ತದೆ, ಹಾಗೆಯೇ ಸ್ಯಾನೇಟೈಸ್ ಮಾಡಲಾಗುತ್ತದೆ. ಇಡೀ ಪ್ರಪಂಚವೇ ಕೊರೊನಾ ವೈರಸ್ ನಿಂದ ತತ್ತರಿಸುತ್ತಿದ್ದು, ಕೊರೊನಾ ವೈರಸ್ ನಿಯಂತ್ರಣಕ್ಕೆ ಇರುವ ಮದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮನೆಯಲ್ಲಿ ಇರುವುದು ದೊಡ್ಡಬಳ್ಳಾಪುರ ಕತ್ತಾಳೆ ಮಕಾನ್ ಜನರು 5 ರೂಪಾಯಿ ಸುಂಕ ವಿಧಿಸುವ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಜೊತೆಗೆ ತಮ್ಮ ಏರಿಯಾಕ್ಕೆ ಕೊರೊನಾ ವೈರಸ್ ಬರದಂತೆ ಎಚ್ಚರಿಕೆ ವಹಿಸಿದ್ದಾರೆ.