ಬಾಗಲಕೋಟೆ: ಜಿಲ್ಲೆಯ ಕಲಾದಗಿಯಲ್ಲಿ ಗ್ರಾಮದಲ್ಲಿ ಸೋಂಕಿತರು ಹೆಚ್ಚಿದ ಪರಿಣಾಮ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ಮಳೆ ಮಧ್ಯೆಯೂ ಪೋಲಿಸ ಪೇದೆ ಕತ೯ವ್ಯ ನಿಷ್ಠೆ ಮೆರದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸೀಲ್ ಡೌನ್ ಆಗಿರೋ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆಯಲ್ಲಿ ಮಳೆ ಮಧ್ಯೆಯೂ ಕೊಡೆ ಹಿಡಿದು ಕಾಯ್ದು ನಿಂತ ಪೇದೆ ಮಾರುತಿ ಬಜಂತ್ರಿ ಅವರ ವೃತ್ತಿನಿಷ್ಠೆಗೆ ಮೆಚ್ಚುಗೆಯ ಮಹಾಪೂರವೆ ವ್ಯಕ್ತವಾಗುತ್ತಿದೆ. ಇನ್ನು ಕಲಾದಗಿ ಪೊಲೀಸ್ ಠಾಣೆಯ ಪೇದೆ ಮಾರುತಿ ಬಜಂತ್ರಿ ಅವರ ಕರ್ತವ್ಯ ನಿಷ್ಠೆ ಕೊಂಡಾಡಿ ಸ್ವತಃ ಎಸ್ ಪಿ ಜಗಲಸಾರ್ ಅವರು ಪೇದೆ ಮಾರುತಿ ಬಜಂತ್ರಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿ,ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು…