ಮಂಡ್ಯ : ಕೊರೋನಾ ಸಂಬಂಧ ಇಡೀ ದೇಶದ ಗಮನ ಸೆಳೆದಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆ ವೈದ್ಯರು.
ವೈದ್ಯರ ಮಾದರಿ ಕಾರ್ಯವನ್ನ ಮೆಚ್ಚಿದ ಮಂಡ್ಯದ ನಾಗರಿಕರು ವೈದ್ಯರನ್ನ ಅಭಿನಂದಿಸಿ, ಗೌರವಿಸಿದ್ರು.
ಹೌದು, ಇತ್ತೀಚೆಗೆ ಮಂಡ್ಯದ ಕೊವಿಡ್ ಆಸ್ಪತ್ರೆ(ಮಿಮ್ಸ್)ಯಲ್ಲಿ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕೊರೋನಾ ಸೋಂಕಿತ ಗರ್ಭಿಣಿಗೆ ಸಿಜೇರಿಯನ್ ಮೂಲಕ ಯಶಸ್ವಿ ಹೆರಿಗೆ ಮಾಡಿಸಿದ್ದರು.
ಮಿಮ್ಸ್ ವೈದ್ಯರಾದ ಡಾ. ಯೋಗೇಂದ್ರ ಕುಮಾರ್ ಮತ್ತು ತಂಡ ಮದುವೆಯಾಗಿ 8 ವರ್ಷಗಳ ನಂತರ ಗರ್ಭ ಧರಿಸಿದ್ದ ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದರು. ಯಶಸ್ವಿ ಹೆರಿಗೆ ಬಳಿಕ ಬಾಣಂತಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಡಾ. ಯೋಗೇಂದ್ರ ಕುಮಾರ್ ಮತ್ತು ತಂಡದ ಸೇವೆಗೆ ಮಂಡ್ಯ ನಾಗರಿಕರು ಗೌರವ ಸಮರ್ಪಣೆ ಮಾಡಿ, ಪುಷ್ಪ ವೃಷ್ಠಿ ಮೂಲಕ ಅಭಿನಂದಿಸಿದ್ರು.
ಮಿಮ್ಸ್ ವೈದ್ಯರಿಗೆ ಮಂಡ್ಯ ನಾಗರಿಕರ ಸನ್ಮಾನ..!
TRENDING ARTICLES