ದೇವನಹಳ್ಳಿ : ಬೆಂಗಳೂರು ಹೊರವಲಯದ ಯಲಹಂಕ ತಾಲೂಕು ತರಬಹಳ್ಳಿ ಗ್ರಾಮದ ಸಮೀಪವಿರುವ ಪ್ರತಿಷ್ಠಿತ ಐಟಿಸಿ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಐಟಿಸಿ ಕಾರ್ಖಾನೆಯಲ್ಲಿ ಸಿಗರೇಟ್ ತಯಾರಿಕೆ ಮಾಡಲಾಗುತ್ತಿದ್ದು ಈ ಕಾರ್ಖಾನೆಯಲ್ಲಿ ಸುಮಾರು 1350 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಇದೀಗ ಈ ಕಾರ್ಖಾನೆಯಲ್ಲಿ 14 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಕೊರೊನಾ ಪ್ರಕರಣಗಳು ದಾಖಲಾದರೂ ಸೀಲ್ ಡೌನ್ ಮಾಡದೇ ರಾಜಾರೋಷವಾಗಿ ಕೆಲಸ ನಿರ್ವಹಿಸುತ್ತಿದೆ. ಕಾರ್ಖಾನೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಸುತ್ತಮುತ್ತ ಗ್ರಾಮಗಳಿಗೂ ಕೊರೊನಾ ಹರಡುವ ಭೀತಿ ಗ್ರಾಮಸ್ಥರಿಗೆ ಶುರುವಾಗಿದೆ. ಇನ್ನೂ ಈ ಕಾರ್ಖಾನೆಗೆ ಸುತ್ತಮುತ್ತ ಗ್ರಾಮಗಳಿಂದ ಸಾಕಷ್ಟು ಜನರು ಕೆಲಸ ಹೋಗುತ್ತಿದ್ದು ಆದ ಕಾರಣ ಕೊರೊನಾ ಹರಡುವ ಭಯ ಪ್ರಾರಂಭವಾಗಿದೆ. ಯಲಹಂಕ ತಹಶಿಲ್ದಾರ್ ಕಾರ್ಖಾನೆಗೆ ಭೇಟಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಐಟಿಸಿ ಕಂಪನಿಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಸಹ ಇದೆ. ಸರ್ಕಾರ ಕಛೇರಿಗಳಲ್ಲಿ, ಗ್ರಾಮಗಳಲ್ಲಿ, ವಾರ್ಡ್ ಗಳಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾದರೆ ಸೀಲ್ ಡೌನ್ ಮಾಡಲು ಆದೇಶ ನೀಡಿರುವ ಸರ್ಕಾರ ಈ ಐಟಿಸಿ ಕಂಪನಿಯಲ್ಲಿ 14 ಕೊರೊನಾ ಪ್ರಕರಣಗಳು ಕಂಡು ಬಂದರು ಯಾಕೇ ಸೀಲ್ ಡೌನ್ ಮಾಡುತ್ತಿಲ್ಲ. ಕೊರೊನ ರೋಗದಿಂದ ಕಾರ್ಮಿಕರನ್ನು ಮತ್ತು ಸುತಮುತ್ತಲಿನ ಗ್ರಾಮಸ್ಥರನ್ನು ರಕ್ಷಣೆ ಮಾಡಬೇಕಾಗಿ ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ, ಕಾರ್ಖಾನೆಯನ್ನು ಸೀಲ್ ಡೌನ್ ಮಾಡದೇ ಇದ್ದಾರೆ ಹೋರಾಟ ಮಾಡುವ ಎಚ್ಚರಿಕೆ ಸಹ ಗ್ರಾಮಸ್ಥರು ನೀಡಿದ್ದಾರೆ.