ಉಡುಪಿ : ಕೋಟದ ಪ್ರತಿಷ್ಠಿತ ಹೊಟೇಲ್ ಮಾಲಕರಿಗೆ ಕೊರೋನಾ ಪಾಸಿಟಿವ್ ಪತ್ತೆಯಾದ ಬೆನ್ನಲ್ಲೆ, ಸಂಪರ್ಕಕ್ಕೆ ಬಂದ 9 ಜನರಲ್ಲಿ ಕೊರೋನ ಪಾಸಿಟಿವ್ ಬಂದಿದೆ. ಜುಲೈ 1 ರಂದು ಹೋಟೆಲ್ ಮಾಲಕರ ಮನೆ ಮತ್ತು ಹೋಟೆಲ್ ಸೀಲ್ ಡೌನ್ ಮಾಡಲಾಗಿತ್ತು. ಅಲ್ಲದೇ ಹೋಟೆಲ್ ಸಿಬ್ಬಂದಿಗಳು ಮತ್ತು ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸಿ ಗಂಟಲ ದ್ರವ ಮಾದರಿ ಪಡೆಯಲಾಗಿತ್ತು. ವರದಿಯಲ್ಲಿ ಐವರು ಹೋಟೆಲ್ ಸಿಬ್ಬಂದಿಗಳು ಮತ್ತು ಹೋಟೆಲ್ ಪಕ್ಕದ ದಿನಸಿ ಅಂಗಡಿಯ ನಾಲ್ವರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಸದ್ಯ ಹೋಟೆಲ್ ಪಕ್ಕದ ದಿನಸಿ ಅಂಗಡಿ, ಮನೆ ಮತ್ತು ಗಿಳಿಯಾರಿನ ಇಬ್ಬರು ಹೊಟೇಲ್ ಸಿಬ್ಬಂದಿಗಳ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮೆಡಿಕಲ್ ರೆಪ್ ಓರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇವರು ಹೆಬ್ರಿ ಆರೋಗ್ಯ ಕೇಂದ್ರದ ಕೊರೋನಾ ಪಾಸಿಟಿವ್ ವೈದ್ಯರ ಸಂಪರ್ಕದಿಂದಾಗಿ ಸೊಂಕು ತಗುಲಿರುವುದು ಪತ್ತೆಯಾಗಿದೆ.