ಗದಗ : ಸ್ವತಃ ಸಚಿವರ ಕ್ಷೇತ್ರದಲ್ಲಿ ಕೊವಿಡ್ ಆಸ್ಪತ್ರೆಗೆ ಸ್ಥಳಿಯರ ವಿರೋಧ ವ್ಯಕ್ತವಾಗುತ್ತಿದೆ.ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಿವಾಸಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು ಪಟ್ಟಣದಲ್ಲಿ ಹೆಚ್ಚುತ್ತಿರೋ ಕೋರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಇಂದು ಬೆಳಿಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ ಸಭೆ ನಡೆಸಿ ಹಲವು ನಿರ್ಧಾರಗಳನ್ನ ಕೈಗೊಂಡಿದ್ದರು. ಪಟ್ಟಣದ ಬಸವೇಶ್ವರ ಸಮುದಾಯ ಭವನವನ್ನ ಕೊವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.ಸಮುದಾಯ ಭವನದಲ್ಲಿ 30 ಬೆಡ್ ಗಳ ವ್ಯವಸ್ಥೆ ಮಾಡಲು ತಾಲೂಕಾಡಳಿತ ಮುಂದಾಗಿದೆ. ಜೊತೆಗೆ ಪಟ್ಟಣದಲ್ಲಿನ ಕುಡಿಯುವ ನೀರು, ಶೌಚಾಲಯ, ವಸತಿ ಗೃಹದ ಮಾಹಿತಿ ಪಡೆದ ಸಿ.ಸಿ.ಪಾಟೀಲ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಸ್ಥಳಿಯರು ಪಟ್ಟಣದ ಮಧ್ಯೆ ಭಾಗದಲ್ಲಿ ಕೊವಿಡ್ ಆಸ್ಪತ್ರೆ ಬೇಡವೆಂದು ಸದ್ಯ ಪ್ರತಿಭಟನೆ ನಡೆಸುತ್ತಿದ್ದು ಪುರಸಭೆ ಸದಸ್ಯರ ನೇತೃತ್ವದಲ್ಲಿ ಸಮುದಾಯ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.